ಗೋಣಿಕೊಪ್ಪ ವರದಿ, ಮೇ. ೨೦ : ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಮಿನಿ ಒಲಿಂಪಿಕ್ ಹಾಕಿ ಕ್ರೀಡೆಯ ೧೪ ವರ್ಷದೊಳಗಿನ ವಿಭಾಗದ ಹಾಕಿಕೂರ್ಗ್ ಬಾಲಕಿಯರ ತಂಡ ಧಾರವಾಡ ತಂಡವನ್ನು ಸೋಲಿಸಿದೆ.

೧೬-೦ ಗೋಲುಗಳ ಅಂತರ ದಿಂದ ಜಯ ಪಡೆದುಕೊಂಡಿತು. ಪ್ರಿನ್ಸಿಯಾ ೪ ಗೋಲು ಸಿಡಿಸಿದರು. ಮನಸ್ವಿ ಹಾಗೂ ದೇಚಕ್ಕ ೩ ಗೋಲು ಹೊಡೆದು ಮಿಂಚು ಹರಿಸಿದರು. ಶೈಲು ೨, ಅಚ್ಚಪಂಡ ರ‍್ಲಿನ್ ಪೊನ್ನಮ್ಮ, ಪ್ರಜ್ಞಾ, ತಾನ್ಯ, ಅನಿಕ ತೇಜರೆಡ್ಡಿ ತಲಾ ಒಂದೊAದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಲು ನೆರವಾದರು. ಧಾರವಾಡ ಗೋಲು ದಾಖಲಿಸಲಾಗದೆ ನಿರಾಸೆ ಅನುಭವಿಸಿತು.

ಆಡಿರುವ ೪ ಪಂದ್ಯಗಳಲ್ಲಿ ಮೂರು ಪಂದ್ಯ ಗೆದ್ದಿರುವ ಕೂರ್ಗ್ ತಂಡವು ಭಾನುವಾರ ಹಾಸನ ತಂಡವನ್ನು ಎದುರಿಸಲಿದ್ದು, ಸೆಮಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ.ಒಕ್ಕಲಿಗ ಕ್ರೀಡಾಕೂಟ ಮುಂದೂಡಿಕೆ

ಸೋಮವಾರಪೇಟೆ, ಮೇ ೨೦: ತಾಲೂಕು ಒಕ್ಕಲಿಗರ ಸಂಘದ ಸುವರ್ಣಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತಾ. ೨೧ ಮತ್ತು ತಾ. ೨೨ರಂದು ಯಡೂರು ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂಗದ ಕ್ರೀಡಾಕೂಟವನ್ನು ಮಳೆಯ ಕಾರಣ ಮುಂದೂಡಲಾಗಿದೆ ತಾ. ೨೮ ಮತ್ತು ೨೯ರಂದು ಯಡೂರು ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ.