*ಗೋಣಿಕೊಪ್ಪ, ಮೇ ೨೧: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಬೆಂಗಳೂರು ಚಿತ್ತ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಥಳೀಯ ಸಂಘ-ಸAಸ್ಥೆಗಳ ಆಶ್ರಯದಲ್ಲಿ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಲಾಯಿತು.
ಗೋಣಿಕೊಪ್ಪಲು ವೆಲ್ ಕೇರ್ ಡಯಾಗ್ನಸ್ಟಿಕ್ ಸ್ಪೆಷಲಿಸ್ಟ್ ಸೆಂಟರ್‌ನಲ್ಲಿ ತಜ್ಞರಿಂದ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಡಿಕೇರಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಪ್ರಮುಖ ಹಾಗೂ ನೇತ್ರ ತಜ್ಞ ಡಾ. ಪ್ರಶಾಂತ್ ಸಿ.ಆರ್. ವಹಿಸಿದರು.
ಮುಖ್ಯ ಅತಿಥಿಗಳಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಖಜಾಂಚಿ ಡಾ. ಕೆ.ಎನ್. ಚಂದ್ರಶೇಖರ್, ಗೋಣಿಕೊಪ್ಪದ ಹಿರಿಯ ವೈದ್ಯ ಡಾ. ಶಿವಪ್ಪ, ಮೈಸೂರು ಜೆ.ಎಸ್.ಎಸ್. ಆಸ್ಪತ್ರೆಯ ಮನೋವೈದ್ಯಕೀಯ ತಜ್ಞ ಡಾ. ರಾಘವನ್‌ಗುಪ್ತ, ಆರ್.ಸಿ.ಹೆಚ್. ಸಂಯೋಜಕ ಬಸಪ್ಪ ಯಾದವಾಡ್ ಉಪಸ್ಥಿತರಿದ್ದರು.v