ಮಡಿಕೇರಿ, ಮೇ ೨೦: ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಎರಡು ವರ್ಷದ ಬಳಿಕ ತಾ. ೨೧ ಮತ್ತು ತಾ. ೨೨ ರಂದು ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಹಬ್ಬವನ್ನು ನಡೆಸಲಾಗಿಲ್ಲ. ಈ ಬಾರಿ ವಿಜೃಂಭಣೆಯಿAದ ನಡೆಸಲಾಗುತ್ತದೆ. ತಾ. ೨೧ ರಂದು (ಇಂದು) ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಎಂಬ ವಿಶೇಷ ಆಚರಣೆಯ ಜೊತೆಗೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿವೆ.
ನಂತರ ರಾತ್ರಿ ಮನೆ ಕಳಿ ಇರುತ್ತದೆ. ತಾ. ೨೨ ರಂದು ಚಮ್ಮಟೀರ ಹಾಗೂ ಮೂಕಳೇರ ಕುಟುಂಬದಲ್ಲಿ ತಲಾ ಒಂದೊAದು ಕೃತಕ ಕುದುರೆ ಹಾಗೂ ಮೊಗವನ್ನು ಹೊತ್ತು ದೇವಸ್ಥಾನ ಸಮೀಪದ ಅಂಬಲದಲ್ಲಿ ಸೇರಿ ಹತ್ತಿರದ ಕೆರೆಯಿಂದ ಊರಿನವರು ಕೆಸರನ್ನು ಹೊತ್ತುತಂದು ಪರಸ್ಪರ ಕೆಸರು ಎರಚಾಟವಾಡಿ ನಂತರ ದೇವಸ್ಥಾನ ಸುತ್ತ ಎರಡು ಕುದುರೆ ಹಾಗೂ ಮೊಗವನ್ನು ಹೊತ್ತು ಬೇಡುಹಬ್ಬದ ಹಾಡನ್ನು ಹಾಡುತ್ತಾ ಹಬ್ಬ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.