ಮಡಿಕೇರಿ, ಮೇ ೨೧: ಮಡಿಕೇರಿ ಲಯನ್ಸ್ ಹಾಗೂ ಮೂರ್ನಾಡು ಲಯನ್ಸ್ ಸಂಸ್ಥೆಯ ಕಾರ್ಯವೈಖರಿಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲಯನ್ ಪಿ. ಧನು ಉತ್ತಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದ ಲಯನ್ಸ್ ಸಂಸ್ಥೆಯಲ್ಲಿ ನಡೆದ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡು ಸಂಸ್ಥೆಗಳು ಮಾದರಿ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದರು.

ಅಲ್ಲದೆ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಲೀಡ್ ಬ್ಯಾಂಕ್ ಮುಖ್ಯಸ್ಥ ಆರ್.ಕೆ. ಬಾಲಚಂದ್ರ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನವೀನ್ ಅಂಬೇಕಲ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಪ್ರಾಂತೀಯ ಪ್ರಥಮ ಮಹಿಳೆ ಜ್ಯೋತಿ ಉತ್ತಯ್ಯ, ಜಿಎಲ್‌ಟಿ ಸಂಯೋಜಕ ಪ್ರೀತಮ್ ಪೊನ್ನಪ್ಪ, ವಲಯ ಅಧ್ಯಕ್ಷರುಗಳಾದ ಗ್ಲೆನ್ ನಿಶಾಂತ್ ಮೆನೆಜಸ್, ಡಾ. ಪಂಚಮ್ ತಿಮ್ಮಯ್ಯ, ಮಡಿಕೇರಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಪಿ.ಪಿ. ಸೋಮಣ್ಣ, ಮೂರ್ನಾಡು ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಗೌತಮ್, ನಿಕಟಪೂರ್ವ ಅಧ್ಯಕ್ಷೆ ಅನಿತಾ ಸೋಮಣ್ಣ ಹಾಗೂ ಕೋಶಾಧಿಕಾರಿ ಕೆ.ಕೆ. ದಾಮೋದರ್ ಉಪಸ್ಥಿತರಿದ್ದರು.

ಮಡಿಕೇರಿ ಲಯನ್ಸ್ ಅಧ್ಯಕ್ಷ ನಟರಾಜು ಕೆಸ್ತೂರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೂರ್ನಾಡು ಲಯನ್ಸ್ ಸಂಸ್ಥೆಯ ಅಧ್ಯಕ್ಷÀ ಅರುಣ್ ಅಪ್ಪಚ್ಚು ವಂದಿಸಿದರು. ಕಮಲ ಮುರುಗೇಶ್ ಪ್ರಾರ್ಥನೆ ಹಾಗೂ ವೇಣು ಅಪ್ಪಣ್ಣ ಧ್ವಜ ವಂದನೆ ನಡೆಸಿಕೊಟ್ಟರು.