*ಗೋಣಿಕೊಪ್ಪ, ಮೇ ೨೧: ಜಂಗಲ್ ಕಟ್ಟಿಂಗ್ ಕಾರ್ಯ ನಿರ್ವಹಣೆಯ ನಿಮಿತ್ತ ದಕ್ಷಿಣ ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ತಾ.೨೪ರಂದು ಹಾತೂರು ಫೀಡರ್‌ನ ಕಳತ್ಮಾಡು, ಕುಂದ, ಬೈಗೋಡು, ಕೈಕೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ, ತಾ. ೨೫ರಂದು ಕಾನೂರು ಫೀಡರ್‌ನ ಹರಿಹರಿ, ಕುಮಟೂರು, ಕೋತೂರು, ನಾಲ್ಕೇರಿ, ಚೂರಿಕಾಡು, ಪಲ್ಲೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಕುಟ್ಟ ಫೀಡರ್‌ನ ಮಂಚಳ್ಳಿ, ಕಾಯಿಮನೆ, ಕಾಕೂರು, ನಾಗರಹೊಳೆ, ನಾಣಚ್ಚಿ ಹಾಗೂ ಬಾಳೆಲೆ ಫೀಡರ್‌ನ ಬಾಳೆಲೆ, ಬಿಳೂರು, ರಾಜಾಪುರ, ಮಲ್ಲೂರು, ನಿಟ್ಟೂರು, ಜಾಗಲೆ, ಕಾರ್ಮಾಡು ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ. ತಾ. ೨೬ರಂದು ಬಿರುನಾಣಿ ಫೀಡರ್‌ನ ಟಿ.ಶೆಟ್ಟಿಗೇರಿ, ನೆಮ್ಮಲೆ, ತೆರಾಲು, ಕೆ.ಕೆ.ಆರ್, ಬಾಡಗರಕೇರಿ, ಕೂಟಿಯಾಲ ಪೂಕಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ನಲ್ಲೂರು ಫೀಡರ್‌ನ ಮತ್ತೂರು, ಕಿರುಗೂರು, ನಲ್ಲೂರು, ಬೆಸಗೂರು, ಪೊನ್ನಪ್ಪಸಂತೆ, ಬೆಕ್ಕೆಸೊಡ್ಲೂರು, ಕಾನೂರು, ವಡ್ಡರಮಾಡು ಗ್ರಾಮಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಗೋಣಿಕೊಪ್ಪ ಶಾಖೆಯ ಹಿರಿಯ ಇಂಜಿನಿಯರ್ ನೀಲ್‌ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.