ಮಡಿಕೇರಿ, ಮೇ. ೨೧: ದಿವಂಗತ ರಾಜೀವ್ ಗಾಂಧಿಯವರು ಸಂಸತ್ತಿನ ಆಡಳಿತ ಪಕ್ಷದ ಪ್ರಧಾನಿ ಮಾತ್ರ ಆಗಿರದೆ ಜನತೆಯ ಪ್ರಧಾನಿಯಾಗಿದ್ದರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ ಬಣ್ಣಿಸಿದರು. ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ೩೧ ನೇ ರಾಜೀವ್ ಗಾಂಧಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಲೋಕಸಭೆ ಚುನಾವಣೆಗೆ ಅವಧಿ ಇದ್ದರೂ ಜನರ ತೀರ್ಮಾನ ಪಡೆಯಬೇಕು ಎಂಬ ಹಂಬಲದಿAದ ೧೯೮೪ರಲ್ಲಿ ಲೋಕ ಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಿ ೪೧೫ ದಾಖಲೆಯ ಸ್ಥಾನಗಳನ್ನು ಪಡೆಯುವ ಮೂಲಕ ತಾವು ಮೌಲ್ಯಾಧಾರಿತ ರಾಜಕಾರಿಣಿ ಎಂದು ನಿರೂಪಿಸಿದರು. ಬಹುಶಃ ರಾಜೀವ್ ಗಾಂಧಿಯವರು ದೂರದೃಷ್ಟಿಯಿಂದ ಅಧಿಕಾರದ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡದೆ ಇದ್ದಲ್ಲಿ ಸೋವಿಯತ್ ಒಕ್ಕೂಟದ ರೀತಿಯಲ್ಲಿ ಭಾರತವು ಛಿದ್ರಗೊಳ್ಳುವ ಸಾಧ್ಯತೆ ಇತ್ತು. ರಾಜೀವ್ ಗಾಂಧಿ ಅದಕ್ಕೆ ಅವಕಾಶ ನೀಡಲಿಲ್ಲ ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಅಖಂಡ ಭಾರತದ ರಕ್ಷಕರೆನಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ರಾಜೀವ್ ಗಾಂಧಿ ವಿಶ್ವವೇ ಮೆಚ್ಚಿದ ನಾಯಕರಾಗಿದ್ದು ಅವರ ಆದರ್ಶಗಳ ಬಗ್ಗೆ ಜನತೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಕಾರದಿಂದ ಭಾರತವನ್ನು ಮುಂದುವರಿದ ದೇಶದ ಸಾಲಿಗೆ ತಂದಿದ್ದು ರಾಜೀವ್ ಗಾಂಧಿ ಸಾಧನೆ. ಮಾನವ ಬಾಂಬ್ ದಾಳಿಗೆ ಬಲಿಯಾದಾಗ ಅವರಿಗೆ ಕೇವಲ ೪೯ ವರ್ಷಗಳಾಗಿದ್ದು, ಅವರು ಬದುಕಿದ್ದರೆ ಭಾರತ ಮತ್ತಷ್ಟು ಬಲಿಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ. ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಎನ್‌ಎಸ್‌ಯುಐ ಅಧ್ಯಕ್ಷ ರೋಶನ್ ಗಣಪತಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ವರ್ತಕ ಘಟಕದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಖಲೀಲ್ ಬಾಷ, ಪೀಟರ್ ಪ್ರಮುಖರಾದ ಕಟ್ರತನ ವೆಂಕಟೇಶ, ಖಾಲಿದ್ ಹಾಕತ್ತೂರು, ಪ್ರಭುರೈ, ದೋಲ್ಪಾಡಿ ಯಶ್, ಸದಾ ಮುದ್ದಪ್ಪ, ತೋಲಂಡ ನಾಣಯ್ಯ, ಮುಂಡAಡ ಸುಧಯ್ ನಾಣಯ್ಯ, ಪ್ರಕಾಶ್ ಆಚಾರ್ಯ, ರವಿಗೌಡ, ಲಕ್ಷಿö್ಮÃ ಪ್ರಸಾದ್ ಪೆರ್ಲ, ಜಿ.ಸಿ.ಜಗದೀಶ್, ಪಾರ್ವತಿ ಫ್ಯಾನ್ಸಿ, ಯಾಕುಬ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.