ವೀರಾಜಪೇಟೆ, ಮೇ ೨೦: ನಗರದ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಠಾಣೆಯಲ್ಲಿ ಬ್ಯಾಂಕ್‌ನ ನಿರ್ದೇಶಕರೆ ದೂರು ನೀಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಬ್ಯಾಂಕ್ ವಿರುದ್ಧ ನಗರ ಠಾಣೆಯಲ್ಲಿ ಬ್ಯಾಂಕ್‌ನ ಗ್ರಾಹಕರು ದೂರು ದಾಖಲಿಸಿದ್ದರು. ಇದೀಗ ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕರ ಮೇಲೆ ಗ್ರಾಹಕರಿಗೆ, ಮೋಸ, ವಂಚನೆ ಮತ್ತು ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಬ್ಯಾಂಕ್ ನಿರ್ದೇಶಕ ಡಿ.ಐ. ಎಜಾಜ್ ಅವರು ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿರ್ದೇಶಕರಾದ ಎಜಾಜ್ ಅವರು ನೀಡಿರುವ ದೂರಿನಲ್ಲಿ ೦೧-೧೨-೧೯೯೫ ರಿಂದ ೩೦-೦೯-೨೦೧೨ ರವರೆಗೆ ಹೆಚ್.ಎಸ್. ಮೊಯಿನುದ್ದೀನ್ ಮತ್ತು ೦೧-೧೦-೨೦೧೨ ರಿಂದ ೩೧-೦೩-೨೦೨೨ ಅವಧಿಯವರೆÀಗೆ ಬಿ.ಆರ್. ಮೊಹಮ್ಮದ್ ಸುಹೇಬ್ ಅವರು ಅಧ್ಯಕ್ಷರಾಗಿದ್ದರು. ಐ.ಕೆ. ಮುಕ್ತಾರ್ ಅಹಮ್ಮದ್ ಸುಮಾರು ೨೬ ವರ್ಷಗಳಿಂದ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪ್ರತಿ ವಾರ್ಷಿಕ ಸಭೆಗಳಲ್ಲಿ ಬ್ಯಾಂಕ್ ಲಾಭದಲ್ಲಿದೆ ಎಂದು ಮಾಜಿ ಅಧ್ಯಕ್ಷರುಗಳು ಹಾಗೂ ವ್ಯವಸ್ಥಾಪಕರು ಗ್ರಾಹಕರಿಗೆ ವಂಚಿಸುತ್ತಾ ಬಂದಿದ್ದಾರೆ. ಸಂಘವು ಹೊಂದಿರುವ ವೀರಾಜಪೇಟೆ ರಾಷ್ಟಿçÃಕೃತ ಬ್ಯಾಂಕ್‌ಗಳಾದ ಎಸ್.ಬಿ.ಐ. ಮತ್ತು ಇಂಡಿಯನ್ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ದೃಢೀಕರಣ ಪತ್ರಗಳನ್ನು ಫೋರ್ಜರಿ ಮಾಡಿ ಲೆಕ್ಕ ಪರಿಶೋಧನೆ ಮಾಡಿಸಿ ಸಂಘವು ಲಾಭದಲ್ಲಿರುವುದಾಗಿ ತೋರಿಸಿದ್ದಾರೆ. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಕೊಡಗು ಮಡಿಕೇರಿಯ ಉಪ ನಿರ್ದೇಶಕರು ೮.೨.೨೦೨೨ ಮತ್ತು ೯.೨.೨೦೨೨ ರಂದು ಬ್ಯಾಂಕ್‌ಗೆ ಭೇಟಿ ನೀಡಿ ೨೦೧೮-೧೯ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯನ್ನು ಪರಿಶೀಲಿಸಿ ೩೧.೩.೨೦೧೯ ರವರೆಗೆ ಸುಮಾರು ೪,೫೪,೧೧,೧೨೦ ರೂಗಳು ಹಣ ದುರುಪಯೋಗ ವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿರುತ್ತಾರೆ. ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಹೆಚ್ಚಿನ ತನಿಖೆ ಮತ್ತು ಹಣ ದುರುಪಯೋಗದ ಕುರಿತು ಸಹಕಾರ ಸಂಘ ಲೆಕ್ಕ ಪರಿಶೋಧನೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯ ಲಾಗಿದ್ದು ನಂತರದಲ್ಲಿ ಇಲಾಖೆಯಿಂದ ಮಡಿಕೇರಿಯ ಲೆಕ್ಕ ಪರಿಶೋಧಕ ಎ. ಗೋಪಾಲಕೃಷ್ಣ ಅವರನ್ನು ಲೆಕ್ಕ ಪರಿಶೋಧನೆಗಾಗಿ ನೇಮಕಗೊಳಿಸ ಲಾಯಿತು. ಆದರೆ ಇಲಾಖೆಯಿಂದ ನೇಮಕಗೊಂಡ ಲೆಕ್ಕ ಪರಿಶೋಧಕರಿಗೆ ಬ್ಯಾಂಕ್‌ನ ವ್ಯವಸ್ಥಾಪಕರು ಯಾವುದೇ ದಾಖಲೆಗಳನ್ನು ಒದಗಿಸದೇ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ. ಇದು ವೀರಾಜಪೇಟೆ, ಮೇ ೨೦: ನಗರದ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಠಾಣೆಯಲ್ಲಿ ಬ್ಯಾಂಕ್‌ನ ನಿರ್ದೇಶಕರೆ ದೂರು ನೀಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಬ್ಯಾಂಕ್ ವಿರುದ್ಧ ನಗರ ಠಾಣೆಯಲ್ಲಿ ಬ್ಯಾಂಕ್‌ನ ಗ್ರಾಹಕರು ದೂರು ದಾಖಲಿಸಿದ್ದರು. ಇದೀಗ ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕರ ಮೇಲೆ ಗ್ರಾಹಕರಿಗೆ, ಮೋಸ, ವಂಚನೆ ಮತ್ತು ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಬ್ಯಾಂಕ್ ನಿರ್ದೇಶಕ ಡಿ.ಐ. ಎಜಾಜ್ ಅವರು ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿರ್ದೇಶಕರಾದ ಎಜಾಜ್ ಅವರು ನೀಡಿರುವ ದೂರಿನಲ್ಲಿ ೦೧-೧೨-೧೯೯೫ ರಿಂದ ೩೦-೦೯-೨೦೧೨ ರವರೆಗೆ ಹೆಚ್.ಎಸ್. ಮೊಯಿನುದ್ದೀನ್ ಮತ್ತು ೦೧-೧೦-೨೦೧೨ ರಿಂದ ೩೧-೦೩-೨೦೨೨ ಅವಧಿಯವರೆÀಗೆ ಬಿ.ಆರ್. ಮೊಹಮ್ಮದ್ ಸುಹೇಬ್ ಅವರು ಅಧ್ಯಕ್ಷರಾಗಿದ್ದರು. ಐ.ಕೆ. ಮುಕ್ತಾರ್ ಅಹಮ್ಮದ್ ಸುಮಾರು ೨೬ ವರ್ಷಗಳಿಂದ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪ್ರತಿ ವಾರ್ಷಿಕ ಸಭೆಗಳಲ್ಲಿ ಬ್ಯಾಂಕ್ ಲಾಭದಲ್ಲಿದೆ ಎಂದು ಮಾಜಿ ಅಧ್ಯಕ್ಷರುಗಳು ಹಾಗೂ ವ್ಯವಸ್ಥಾಪಕರು ಗ್ರಾಹಕರಿಗೆ ವಂಚಿಸುತ್ತಾ ಬಂದಿದ್ದಾರೆ. ಸಂಘವು ಹೊಂದಿರುವ ವೀರಾಜಪೇಟೆ ರಾಷ್ಟಿçÃಕೃತ ಬ್ಯಾಂಕ್‌ಗಳಾದ ಎಸ್.ಬಿ.ಐ. ಮತ್ತು ಇಂಡಿಯನ್ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ದೃಢೀಕರಣ ಪತ್ರಗಳನ್ನು ಫೋರ್ಜರಿ ಮಾಡಿ ಲೆಕ್ಕ ಪರಿಶೋಧನೆ ಮಾಡಿಸಿ ಸಂಘವು ಲಾಭದಲ್ಲಿರುವುದಾಗಿ ತೋರಿಸಿದ್ದಾರೆ. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಕೊಡಗು ಮಡಿಕೇರಿಯ ಉಪ ನಿರ್ದೇಶಕರು ೮.೨.೨೦೨೨ ಮತ್ತು ೯.೨.೨೦೨೨ ರಂದು ಬ್ಯಾಂಕ್‌ಗೆ ಭೇಟಿ ನೀಡಿ ೨೦೧೮-೧೯ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯನ್ನು ಪರಿಶೀಲಿಸಿ ೩೧.೩.೨೦೧೯ ರವರೆಗೆ ಸುಮಾರು ೪,೫೪,೧೧,೧೨೦ ರೂಗಳು ಹಣ ದುರುಪಯೋಗ ವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿರುತ್ತಾರೆ. ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಹೆಚ್ಚಿನ ತನಿಖೆ ಮತ್ತು ಹಣ ದುರುಪಯೋಗದ ಕುರಿತು ಸಹಕಾರ ಸಂಘ ಲೆಕ್ಕ ಪರಿಶೋಧನೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯ ಲಾಗಿದ್ದು ನಂತರದಲ್ಲಿ ಇಲಾಖೆಯಿಂದ ಮಡಿಕೇರಿಯ ಲೆಕ್ಕ ಪರಿಶೋಧಕ ಎ. ಗೋಪಾಲಕೃಷ್ಣ ಅವರನ್ನು ಲೆಕ್ಕ ಪರಿಶೋಧನೆಗಾಗಿ ನೇಮಕಗೊಳಿಸ ಲಾಯಿತು. ಆದರೆ ಇಲಾಖೆಯಿಂದ ನೇಮಕಗೊಂಡ ಲೆಕ್ಕ ಪರಿಶೋಧಕರಿಗೆ ಬ್ಯಾಂಕ್‌ನ ವ್ಯವಸ್ಥಾಪಕರು ಯಾವುದೇ ದಾಖಲೆಗಳನ್ನು ಒದಗಿಸದೇ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ. ಇದು