ಕುಶಾಲನಗರ, ಮೇ ೨೦: ಕುಶಾಲನಗರ ತಾಲೂಕು ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಮತ್ತು ದೇವಾಲಯ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ತಾ. ೨೭ ರಂದು ನಡೆಯಲಿರುವ ಗ್ರಾಮ ದೇವತೆ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೆಚ್. ಬಿ. ಚಂದ್ರಪ್ಪ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ದೊಡ್ಡಮ್ಮ-ಚಿಕ್ಕಮ್ಮ ದೇವಾಲಯದಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ ಆಚರಣೆಗಳನ್ನು ಭಕ್ತಿಪೂರ್ವಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ ಗ್ರಾಮದೇವತೆ ಹಬ್ಬದ ಪ್ರಯುಕ್ತ ಮೇ ೧೬ ರಿಂದ ವಿಶೇಷ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಲಿದ್ದು ೧೬ ರಂದು ಮಹದೇಶ್ವರ ಮತ್ತು ಸಿದ್ದೇಶ್ವರ ಪರ್ವ ಕಾರ್ಯಕ್ರಮ, ೧೮ ರಂದು ಸ್ಥಳೀಯ ದೇವಸ್ಥಾನಗಳ ದೇವರುಗಳಿಗೆ ಎಣ್ಣೆಮಜ್ಜನ, ೨೨ ರಂದು ಕುಶಾಲನಗರ, ಮೇ ೨೦: ಕುಶಾಲನಗರ ತಾಲೂಕು ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಮತ್ತು ದೇವಾಲಯ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ತಾ. ೨೭ ರಂದು ನಡೆಯಲಿರುವ ಗ್ರಾಮ ದೇವತೆ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೆಚ್. ಬಿ. ಚಂದ್ರಪ್ಪ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ದೊಡ್ಡಮ್ಮ-ಚಿಕ್ಕಮ್ಮ ದೇವಾಲಯದಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ ಆಚರಣೆಗಳನ್ನು ಭಕ್ತಿಪೂರ್ವಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ ಗ್ರಾಮದೇವತೆ ಹಬ್ಬದ ಪ್ರಯುಕ್ತ ಮೇ ೧೬ ರಿಂದ ವಿಶೇಷ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಲಿದ್ದು ೧೬ ರಂದು ಮಹದೇಶ್ವರ ಮತ್ತು ಸಿದ್ದೇಶ್ವರ ಪರ್ವ ಕಾರ್ಯಕ್ರಮ, ೧೮ ರಂದು ಸ್ಥಳೀಯ ದೇವಸ್ಥಾನಗಳ ದೇವರುಗಳಿಗೆ ಎಣ್ಣೆಮಜ್ಜನ, ೨೨ ರಂದು ನಡೆಯಲಿದೆ. ತಾ. ೨೮ ರಂದು ಬೆಳಿಗ್ಗೆ ಬನದ ಹತ್ತಿರ ಜಾತ್ರೆ ಮತ್ತು ಶಾಲಾ ಮೈದಾನದಲ್ಲಿ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ನಡೆಸಲಾಗು ವುದು. ಬನದ ಹತ್ತಿರ ಜಾತ್ರೆ ನಡೆಯಲಿದ್ದು, ಬೆಳಿಗ್ಗೆ ೮ ಗಂಟೆಯಿAದ ಪೂಜಾ ಕಾರ್ಯಕ್ರಮ ಹಾಗೂ ನಿರಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಾಹಿತಿ ಒದಗಿಸಿದರು ಗ್ರಾಮಸ್ಥರು ಸೇರಿದಂತೆ ಸರ್ವ ಭಕ್ತಾದಿಗಳು ಎಲ್ಲ ರೀತಿಯ ತನು-ಮನ-ಧನ ಸಹಾಯ ನೀಡುವಂತೆ ಅವರು ಕೋರಿದರು. ಸಮಿತಿಯ ಉಪಾಧ್ಯಕ್ಷ ಟಿ.ವಿ ಪ್ರಕಾಶ್, ಖಜಾಂಚಿ ಟಿ.ಸಿ. ಶಿವಕುಮಾರ್, ಕಾರ್ಯದರ್ಶಿ ಟಿ.ಹೆಚ್. ಸೋಮಚಾರಿ, ಮಾಜಿ ಅಧ್ಯಕ್ಷ ಟಿ.ಟಿ. ಗೋವಿಂದ, ಸದಸ್ಯರಾದ ಟಿ.ಬಿ. ಮಂಜುನಾಥ, ಟಿ.ಎಂ. ವಿಕ್ರಂ ಇದ್ದರು.