ವೀರಾಜಪೇಟೆ, ಮೇ ೨೦: ವ್ಯಕ್ತಿಯ ಮಾನಸಿಕ ಒತ್ತಡಗಳ ನಿವಾರಣೆಗಾಗಿ ಯೋಗಭ್ಯಾಸ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮತ್ತು ಅಂರ‍್ರಾಷ್ಟಿçÃಯ ರಗ್ಬಿಪಟು ಮಾದಂಡ ಪಿ. ತಿಮ್ಮಯ್ಯ ತಿಳಿಸಿದರು.
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಬೇಸಿಗೆ ಶಿಬಿರ ಶಾಲಾ ಆವರಣದಲ್ಲಿ ಆಯೋಜಿಸಿತ್ತು. ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾದಂಡ ತಿಮ್ಮಯ್ಯ ಅವರು, ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯನ್ನು ರೂಡಿಸಿಕೊಳ್ಳಬೇಕು. ಇದರಿಂದ ದೈಹಿಕವಾಗಿ ಸದೃಢರಾಗುತ್ತಾರೆ. ಎಲ್ಲಾ ಕ್ರೀಡೆಗಳಲ್ಲಿ ಕಠಿಣ ಪರಿಶ್ರಮ ಮುಖ್ಯ. ಪರಿಶ್ರಮದಿಂದಲೇ ವ್ಯಕ್ತಿ ತನ್ನ ಗುರಿಯನ್ನು ಸಾಧಿಸಬಲ್ಲ. ಕ್ರೀಡಾಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಎಂದು ಹೇಳಿದರು.
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಮಾದಂಡ ಪೂವಯ್ಯ ಮಾತನಾಡಿ ಪೋಷಕರು ಮಕ್ಕಳಿಗೆ ಮೊದಲ ಗುರುವಾಗಬೇಕು. ತರಬೇತಿ ಶಿಬಿರಗಳಲ್ಲಿ ಭಾಗಿಗಳಾದಲ್ಲಿ ಶಿಸ್ತು, ಸಮಯ ಪ್ರಜ್ಞೆ, ಮಕ್ಕಳಲ್ಲಿ ಜಾಗೃತಗೊಳ್ಳುತ್ತದೆ ಎಂದರು.
ತರಬೇತಿ ಶಿಬಿರದಲ್ಲಿ ಸುಮಾರು ೬೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪರಿತೋಷಕಗಳನ್ನು ವಿತರಿಸಲಾಯಿತು. ತಮಿಳುನಾಡು ರಾಜ್ಯ ಕ್ರಿಕೆಟ್ ಅಸೋಶಿಯೇಷನ್‌ನ ಪ್ರಾಮಾಣೀಕೃತ ತರಬೇತಿದಾರ ಶಿವಶಕ್ತಿ ಮತ್ತು ಪ್ರಗತಿ ಶಾಲೆಯ ದೈಹಿಕ ಶಿಕ್ಷಕ ಕವಿತೇಶ್ ಅವರುಗಳು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಮೈಮೂನಾ ಸ್ವಾಗತಿಸಿ, ಶಿಕ್ಷಕಿ ತೇಜಸ್ವಿನಿ ನಿರೂಪಿಸಿ, ಪ್ರಗತಿ ಶಾಲೆಯ ಮುಖ್ಯ ಶಿಕ್ಷಕಿ ವಿಮಲ ವಂದಿಸಿದರು.