ವೀರಾಜಪೇಟೆ, ಮೇ ೨೧: ವೀರಾಜಪೇಟೆ, ಐಮಂಗಲ, ಮಗ್ಗುಲ, ವೈಪಡ ಮೂರು ಗ್ರಾಮಗಳು ಸೇರಿ ಎರಡು ವರ್ಷಕ್ಕೊಮ್ಮೆ ನಡೆಸುವ ಶ್ರೀ ಭದ್ರಕಾಳಿ ದೇವರ ಬೋಡು ಹಬ್ಬವು ತಾ. ೧೯ ರಂದು ಪ್ರಾರಂಭವಾಗಿದ್ದು, ತಾ. ೨೩ ರವರೆಗೆ ನಡೆಯಲಿದೆ. ತಾ. ೨೧ ರಂದು ಮಧ್ಯಾಹ್ನ ೩ ಗÀಂಟೆಗೆ ಮಗ್ಗುಲ ಗ್ರಾಮದ ಮಾಚೆಟ್ಟಿ ಪರೆಲ್ ಗದ್ದೆಯಲ್ಲಿ ಮೂರು ಗ್ರಾಮದ ಕುದುರೆ ಹಬ್ಬ ನಡೆಯಲಿದೆ. ರಾತ್ರಿ ೧೦ ಗÀಂಟೆಗೆ ದೇವರ ತೆರೆ ಹಬ್ಬ. ತಾ. ೨೨ ರಂದು ಸಾಯಂಕಾಲ ೩ ಗÀಂಟೆಗೆ ಕುಂದ ಚೂಳೆ ಹಬ್ಬ ನಡೆಯಲಿದೆ. ತಾ. ೨೩ ರಂದು ಕಳ ಮಡ್‌ಕ್‌ವೋ ಕಾರ್ಯಕ್ರಮ ನಡೆಯಲಿದೆ ಎಂದು ಮೂರು ಗ್ರಾಮದ ತಕ್ಕ ಮುಖ್ಯಸ್ಥರು ತಿಳಿಸಿರುತ್ತಾರೆ. ಐಮಂಗಲ ಗ್ರಾಮದ ದೇವತಕ್ಕರಾದ ಬೊಳ್ಳಚಂಡ ಮುತ್ತಣ್ಣ, ಮಗ್ಗುಲ ಗ್ರಾಮದ ಕೊಟ್ಟಿಯಂಡ ಜೀವನ್, ವೈಪಡ ಗ್ರಾಮದ ಪುಲಿಯಂಡ ಲೋಕೇಶ್ ತಕ್ಕಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.