ಮಡಿಕೇರಿ, ಮೇ ೧೮: ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾಕುಶಾಲಪ್ಪ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದು, ಅವರ ಕಾಲಿನ ಮೂಳೆ ಮುರಿತವಾಗಿದೆ. ಈ ಕಾರಣದಿಂದಾಗಿ ಅವರಿಗೆ ವೈದ್ಯರು ೪೫ ದಿನಗಳ ವಿಶ್ರಾಂತಿಯಲ್ಲಿರಲು ಸಲಹೆ ನೀಡಿದ್ದು, ಈ ಅವಧಿಯಲ್ಲಿ ಯಾವದೇ ಪೂರ್ವ ನಿಗದಿತ ಹಾಗೂ ಹೊಸ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.