ಮಡಿಕೇರಿ, ಮೇ ೧೮: ನೂರಾರು ವರ್ಷಗಳ ಇತಿಹಾಸವಿರುವ ಕುಂಬಳಗೇರಿ ಉಕ್ಕುಡದ ಶ್ರೀ ಮಾರಿಯಮ್ಮ ದೇವಾಲಯದ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮುಂಜಾನೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯಿತು. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಿತು. ಗ್ರಾಮದ ಒಳಿತಿಗಾಗಿ ದೇವರನ್ನು ಪ್ರಾರ್ಥಿಸಲಾಯಿತು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ಪುಟ್ಟಣ್ಣ, ಉಪಾಧ್ಯಕ್ಷರಾದ ನವೀನ್ ಕುಮಾರ್, ಕಾರ್ಯದರ್ಶಿ ಸುಬ್ರಮಣಿ, ಖಜಾಂಚಿ ದೀಪು ಕೃಷ್ಣಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.