ಗೋಣಿಕೊಪ್ಪಲು, ಮೇ 19: ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ, ಮೈಸೂರು ದಸರಾ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಜತ ಪದಕ ಸಾಧನೆ ಮಾಡಿದ್ದ ಪೆÇನ್ನಂಪೇಟೆಯ ಟಿ.ಪಿ.ಶರತ್ ಬಳ್ಳಾರಿಯ ತೋರಣಗಲ್ನಲ್ಲಿ ಆರಂಭಗೊಂಡಿರುವ ರಾಜ್ಯ ಸಬ್ ಜೂನಿಯರ್ ಬಾಕ್ಸಿಂಗ್ ತರಬೇತಿ ಶಿಬಿರದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ದಕ್ಷಿಣ ಭಾರತ, ರಾಜ್ಯ, ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿರುವ ಟಿ.ಪಿ.ಶರತ್ ಅವರನ್ನು ತರಬೇತುದಾರರನ್ನಾಗಿ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಆಯ್ಕೆ ಮಾಡಿದ್ದು, ತಾ. 20ರಿಂದ (ಇಂದಿನಿಂದ) 10 ದಿನಗಳು ಬಳ್ಳಾರಿಯಲ್ಲಿ ನಡೆಯುವ ಸಬ್ ಜೂನಿಯರ್ ವಿಭಾಗಕ್ಕೆ ತರಬೇತಿ ನೀಡಲಿದ್ದಾರೆ. ಶರತ್ ಅವರು ಪೆÇನ್ನಂಪೇಟೆಯ ಟಿ.ಎಸ್.ಪುಟ್ಟರಾಜು ದಂಪತಿ ಪುತ್ರ.