ಮಡಿಕೇರಿ, ಮೇ 19: ಮಡಿಕೇರಿ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪೆÇಲೀಸ್ ಇಲಾಖೆ ಹಾಗೂ ಕಾನೂನು ಪ್ರಾಧಿಕಾರ ಇಲಾಖೆಯ ಜಂಟಿ ಆಯೋಗದಲ್ಲಿ ನ್ಯಾಯಾಧೀಶ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪೆÇಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಉಪ ವಿಭಾಗದ ಪೆÇಲೀಸ್ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ವಹಿಸಿದ್ದರು. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಪೆÇಲೀಸ್ ಠಾಣಾ ಉಪ ನಿರೀಕ್ಷಕ ದೇವರಾಜ್, ಸಂಚಾರಿ ಪೆÇಲೀಸ್ ಠಾಣಾ ಉಪ ನಿರೀಕ್ಷಕಿ ಅಂತಿಮ ಹಾಗೂ ಸಹಾಯಕ ಉಪ ನಿರೀಕ್ಷಕ ಪದ್ಮನಾಭ, ಟ್ಯಾಕ್ಷಿ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ಮತ್ತು ಪದಾಧಿಕಾರಿಗಳು, ಮಡಿಕೇರಿ ಸಂಚಾರಿ, ಮಡಿಕೇರಿ ನಗರ ಮತ್ತು ಮಹಿಳಾ ಠಾಣಾ ಪೆÇಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.