ವೀರಾಜಪೇಟೆ, ಮೇ 19: ಈ ದೇಶದ ಒಂದೊಂದು ಇಂಚು ಭೂಮಿ ಕೂಡ ಹಿಂದೂ ಸಮಾಜದ ಆಸ್ತಿ. ದೊಣ್ಣೆ ತಂದು ಕಲ್ಲು ಹೊಡೆಯುವ ಸಂಸ್ಕøತಿ ನಮ್ಮ ಹಿಂದೂ ಸಂಸ್ಕøತಿಯಲ್ಲ; ಸಮಾಜ ವಿರೋಧಿ ಚಟುವಟಿಕೆ ನಡೆಸುವ ಸಂಸ್ಕøತಿ ಹಿಂದೂ ಸಂಸ್ಕøತಿಯಲ್ಲ ಎಂದು ತೋಟಂದಾರ್ಯ ಸಂಸ್ಥಾನ ಮಠ ಬಸವಪಟ್ಟಣದ ಸ್ವಾಮೀಜಿ ಸ್ವತಂತ್ರ ಬಸವಲಿಂಗ ಅವರು ಪ್ರತಿಪಾದಿಸಿದರು.
ವಿಶ್ವ ಹಿಂದೂ ಪರಿಷತ್, ಭಜರಂಗದಳ, ದುರ್ಗಾವಾಹಿನಿ ಮಾತೃಶಕ್ತಿ ಸಹಯೋಗದಲ್ಲಿ ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಜರುಗಿದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಆಶೀರ್ವಚನ ನೀಡಿ ಸ್ವಾಮೀಜಿ ಮಾತನಾಡಿದರು.
ನಮ್ಮ ಆಸ್ತಿಯನ್ನು ರಕ್ಷಿಸಲು ಯಾರ ಅಪ್ಪಣೆಯೂ ಬೇಕಾಗಿಲ್ಲ. ನಮ್ಮ ಆಸ್ತಿಯನ್ನು ಕಬಳಿಸಿದವರ ಮೇಲೆ ಕ್ರಮ ಜರುಗಿಸುವ ಬದಲು ಶಾಂತಿ ಬಯಸುವ ನಮ್ಮನ್ನು ಹೆದರಿಸುವ ಅವಶ್ಯಕತೆ ಇಲ್ಲ. ನಮಗೆ ಯಾರ ಅಂಜಿಕೆಯೂ ಇಲ್ಲ. ನಮ್ಮ ತಾಯ್ನಾಡಿನ ಉಳಿವಿಗಾಗಿ ಧರ್ಮದ ರಕ್ಷಣೆಗಾಗಿ ಇಂತಹ ಲಕ್ಷಾಂತರ ಕಾರ್ಯಕ್ರಮಗಳನ್ನು ನಡೆಸುತ್ತೇವೆ, ಭಾಗವಹಿಸುತ್ತೇವೆ. ಕೆಲವು ಬುದ್ಧಿಜೀವಿಗಳು ಅನ್ನಿಸಿಕೊಂಡವರು ಹಿಂದೂಗಳ ಮನೆ ಮೇಲೆ, ಪೊಲೀಸರುಗಳ ಮೇಲೆ, ಹಿಂದೂ ಕಾರ್ಯ ಕರ್ತರ ಹತ್ಯೆಯಾದ ಸಂದರ್ಭ ಬಾಯಿಬಿಚ್ಚಿಲ್ಲ. ಬಹಳ ವರ್ಷಗಳ ಕಾಲ ನಾವು ಸೋತಿದ್ದೇವೆ.
(ಮೊದಲ ಪುಟದಿಂದ) ಆದರೆ ಸತ್ತಿರಲಿಲ್ಲ. ಇನ್ನು ಮುಂದೆ ನಮ್ಮ ಪ್ರತಿಯೊಂದು ಹೆಜ್ಜೆಯೂ ಗೆಲುವಿನ ಹೆಜ್ಜೆಯಾಗಿರುತ್ತದೆ ಎಂದು ಹೇಳಿದರು.
ನಾವೇನು ಸಾರ್ವಜನಿಕ ಆಸ್ತಿಯ ಮೇಲೆ ಕಲ್ಲು ಹೊಡೆಯುವವರು ಅಲ್ಲ. ನಮ್ಮನ್ನು ರಕ್ಷಣೆ ಮಾಡುವ ಆರಕ್ಷಕರ ಜೀಪು ಉರುಳಿಸಿ ಬೀಳಿಸುವವರಂತೂ ಅಲ್ಲವೇ ಅಲ್ಲ. ಸಮಾಜ ವಿರೋಧಿ ಚಟುವಟಿಕೆ ಮಾಡುವವರು ಅಲ್ಲ. ಇನ್ನು ನಾವು ಸಮಾಧಾನದಿಂದ ಕೂರಲು ಇದು ಗಾಂಧಿ ಭಾರತವಲ್ಲ, ಆಕ್ರಮಣ ಮಾಡಿದವರನ್ನು ನುಗ್ಗಿ ಹೊಡೆದು ಸರ್ಜಿಕಲ್ ಸ್ಟ್ರೈಕ್ ಮಾಡುವ ಮೋದಿ ಭಾರತ ಎಂದರು.
ಬಾಲವಾಗ್ಮಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಿ ನಮ್ಮ ದೇಶದ ಮೇಲೆ, ಹಿಂದೂ ಸಂಸ್ಕøತಿ, ಸನಾತನ ಧರ್ಮದ ಮೇಲೆ ಅದೆಷ್ಟೊ ಬಾರಿ ದಾಳಿ ನಡೆಸಿದರೂ ನಮ್ಮ ಹಿಂದೂ ಧರ್ಮ ಬಲಿಷ್ಠವಾಗಿ ಉಳಿದುಕೊಂಡಿದೆ. ಒಂದು ಸಮಾಜ ಹಾಗೂ ಜನಾಂಗವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕೆಲವರು ನಮ್ಮ ಧರ್ಮ ಮಾರಾಟದಲ್ಲಿ ತೊಡಗಿದ್ದಾರೆ. ಫ್ರಿಡ್ಜ್, ಫ್ಯಾನ್, ಫೋನ್ ಇನ್ನಿತರ ವಸ್ತುಗಳಿಗೆ ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಧರ್ಮ ಉಳಿಯಬೇಕಾದರೆ ಹಿಂದೂಗಳು ಒಗ್ಗೂಡಬೇಕು. ಜಾತಿ, ಮತ, ಪಂಕ್ತಿಗಳೆಲ್ಲವನ್ನು ನಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಂಡು ಹೊರಗೆ ಬಂದಾಗ ನಾವೆಲ್ಲಾ ಹಿಂದೂ ಎಂಬ ಭಾವನೆ ಇರಬೇಕು. ಹೆಣ್ಣುಮಕ್ಕಳು ಜಾಗೃತಿಗೊಂಡರೆ ಇಡೀ ಸಮಾಜ ಜಾಗೃತಗೊಳ್ಳುತ್ತದೆ. ಸನಾತನ ಧರ್ಮವನ್ನು ನಾಶ ಮಾಡಲು ಒಂದು ವರ್ಗ ಹವಣಿಸುತ್ತಿದೆ. ಹಿಂದೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ಘಟನೆಗಳು ಇದೀಗ ಕರ್ನಾಟಕದಲ್ಲಿ ನಡೆಯುತ್ತಿವೆ. ಭಾರತದ 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂ ಕಾರ್ಯಕರ್ತರ ರಕ್ತಕ್ಕೆ ಕರಗದ ಕೆಲವು ಜೀವಗಳು ಕಲ್ಲಂಗಡಿ ಹಣ್ಣಿಗೆ ಕರಗುತ್ತಿದೆ. ಇದು ನಮ್ಮ ಸಮಾಜ ಎಂದು ವ್ಯಂಗ್ಯವಾಡಿದರು.
ನಮ್ಮ ಜನಾಂಗದ ಬಗ್ಗೆ ನಮ್ಮ ಧರ್ಮದ ಬಗ್ಗೆ ನಮಗೆ ಗೌರವ ವಿಶ್ವಾಸಗಳಿಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಜಗತ್ತಿನ ಹಲವು ಪ್ರಮುಖ ಜನಾಂಗಗಳು ನಾಶವಾಗಿ ಹೋದ ಉದಾಹರಣೆಗಳಿವೆ. ಈಜಿಪ್ಟ್, ಮೆಸಪಟೋಮಿಯಾ, ಯುರೋಪ್ ಮುಂತಾದಲ್ಲಿ ನಾಗರಿಕತೆ ಜಗತ್ತಿನ ಭೂಪಟದಿಂದ ಹೇಳ ಹೆಸರಿಲ್ಲದಂತೆ ಮಾಯವಾಗಿ ಹೋದವು. ಆದರೆ ನಮ್ಮ ಹಿಂದೂ ಸಂಸ್ಕøತಿ ಸತತ ಒಂದೂವರೆ ಸಾವಿರ ವರ್ಷಗಳಿಂದ ಅನೇಕ ಬಾಹ್ಯ ದಾಳಿಗೆ ತುತ್ತಾದರೂ ಇನ್ನೂ ಈ ಜಗತ್ತಿನಲ್ಲಿ ಉಳಿದುಕೊಂಡಿದೆ ಎಂದು ವಿವರಿಸಿದರು.
ಆದರೆ ಇತ್ತೀಚೆಗೆ ಕೆಲವರು ಇದರ ಅರಿವಿಲ್ಲದ ಜನತೆ ಒಂದು ಕುಕ್ಕರ್ ಮತ್ತು ಫ್ರಿಡ್ಜ್ ಮೇಲಿನ ಆಸೆಗಾಗಿ ತಾವು ಹುಟ್ಟಿ ಬೆಳೆದ ಧರ್ಮ ಮರೆತು ಮತಾಂತರ ಆಗುತ್ತಿದ್ದಾರೆ. ಒಬ್ಬ ಹೆಣ್ಣು ಮತಾಂತರವಾದರೆ ಒಂದು ಪೀಳಿಗೆಯೇ ಮತಾಂತರವಾದಂತೆ. ಆದ್ದರಿಂದ ಎಲ್ಲರೂ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ತಿಳಿ ಹೇಳಿ ಧರ್ಮದ ಮಹತ್ವವನ್ನು ಅರಿಯುವಂತೆ ಮಾಡಿ. ಆ ಮೂಲಕ ಸಮಸ್ತ ಹಿಂದೂ ಧರ್ಮೀಯರು ಜಾಗೃತರಾಗಬೇಕಿದೆ. ಹಿಂದೂಗಳು ಒಂದುಗೂಡುವವರೆಗೂ ಧರ್ಮದ ರಕ್ಷಣೆ ಸಾಧ್ಯವಿಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಸಾಲು ಸಾಲು ಸಾವಿಗೆ ನ್ಯಾಯ ಒದಗಿಸಲು ಸಮಸ್ತ ಹಿಂದೂ ಸಮಾಜ ಒಂದಾಗಬೇಕಿದೆ. ಮಕ್ಕಳಿಗೆ, ತಾಯಂದಿರಿಗೆ ಸಂಸ್ಕಾರ ಕೊಟ್ಟಾಗ ಹಿಂದೂ ಸಮಾಜ ಜಾಗೃತವಾಗುತ್ತದೆ ಎಂಬ ಸಂದೇಶಭರಿತ ಮಾತುಗಳನ್ನಾಡಿದರು.
ವಿಶ್ವ ಹಿಂದೂ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ, ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಇಂದು ಹಿಂದೂ ಸಮಾಜ ಇಡೀ ವಿಶ್ವವೇ ಬೆರಗುಗೊಳ್ಳುವಂತೆ ಎದ್ದು ನಿಲ್ಲುತ್ತಿದೆ. ಹಿಂದೂ ಸಮಾಜದಲ್ಲಿ ಹುಟ್ಟಿ ಹಿಂದೂವಾಗಿ ಬದುಕದಿದ್ದ ಮೇಲೆ ಅವನು ಜೀವಂತ ಶವಕ್ಕೆ ಸಮ. ಭಾರತ ಈ ಹಿಂದೆ ಹಿಂದೂ ರಾಷ್ಟ್ರವಾಗಿತ್ತು. ಈಗಲೂ ಆಗಿದೆ, ಮುಂದೆಯೂ ಆಗಿರಲಿದೆ. ಇದನ್ನು ಯಾರೂ ತಡೆಯಲಾರರು ಎಂದರು.
ಬೈತೂರು ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಪುಗ್ಗೇರ ಪೆÇನ್ನಪ್ಪ ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ. ಬೋಪಯ್ಯ ವೇದಿಕೆಯೇರದೆ ಸಭಾ ಕಾರ್ಯಕ್ರಮವನ್ನು ಕಾರ್ಯಕರ್ತರ ಜೊತೆಗೆ ಕುಳಿತೇ ಆಲಿಸಿದರು.
ವೇದಿಕೆಯಲ್ಲಿ, ವಿಶ್ವ ಹಿಂದೂ ಪರಿಷತ್ತಿನ ತಾಲೂಕು ಅಧ್ಯಕ್ಷ ಬಿ.ಎಂ ಕುಮಾರ್, ಲೋಕೇಶ್, ಮಾತೃಮಂಡಳಿಯ ಧನಲಕ್ಷ್ಮಿ ಇದ್ದರು.
ಕೇತಿರ ಯತೀಶ್ ಸ್ವಾಗತಿಸಿದರು. ಕುಮಾರಿ ಪ್ರತೀಕ್ಷಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಬಿಜೆಪಿ ಮುಖಂಡ ಕಿಲನ್ ಗಣಪತಿ, ಉದÀ್ಯಮಿ ವಿಷ್ಣು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್, ಕಾಂತಿ ಸತೀಶ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೀನಾ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಬಿಜೆಪಿ ನಗರಾಧ್ಯಕ್ಷ ಟಿ.ಪಿ. ಕೃಷ್ಣ, ಬಿಜೆಪಿ ಮುಖಂಡ ಸುವಿನ್ ಗಣಪತಿ, ಆರ್ಎಸ್ಎಸ್ ಜಿಲ್ಲಾ ಕಾರ್ಯವಾಹ ಚಕ್ಕೇರ ಮನು, ಮಾಳೇಟಿರ ಶ್ರೀನಿವಾಸ್, ವಿ.ಹೆಚ್.ಪಿ. ಅಖಂಡ ಪ್ರಮುಖ್ ಹೇಮಂತ್, ತಾಲೂಕು ಭಜರಂಗದಳ ಅಧ್ಯಕ್ಷ ವಿವೇಕ್ ರೈ, ಸಾಯಿನಾಥ್ ನಾಯಕ್, ವಿಹೆಚ್ಪಿ ತಾಲೂಕು ಕಾರ್ಯದರ್ಶಿ ಕೇತಿರ ಯತೀಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಪಟ್ಟಣ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.
-ಉಷಾಪ್ರೀತಂ, ಪ್ರವೀಣ್ ಚಂಗಪ್ಪ, ಕಿಶೋರ್ ಶೆಟ್ಟಿ