ಮಡಿಕೇರಿ, ಮೇ ೧೮: ಪಾರಿಜಾತ ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟ್ ಅಖಿಲ ಕರ್ನಾಟಕ ಬ್ರಾಹ್ಮಣ ಯುವಕ ಸಂಘದ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆದ ಗೀತಗಾಯನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯದಲ್ಲಿ ಭಾಗವಹಿಸಿದ್ದ ಕೆ.ಬಿ. ಚೈತನ್ಯಳಿಗೆ ಡಾ. ಪುನಿತ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಕೆ ಚೆಟ್ಟಿಮಾನಿ ಸಾಂದೀಪನಿ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಅಯ್ಯಂಗೇರಿ ಗ್ರಾಮದ ಕಾವೇರಿಮನೆ ಭರತ ಮತ್ತು ಯೋಗಿತ ದಂಪತಿಯ ಪುತ್ರಿ.