ವೀರಾಜಪೇಟೆ, ಮೇ 19: ಕರ್ನಾಟಕ ಲೇಖಕಿಯರ ಸಂಘ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ವಿಜಯಾವಿಷ್ಣು ಭಟ್ ಅಧ್ಯಕ್ಷತೆಯಲ್ಲಿ ಅಂತರ್ಜಾಲ ವಚನ ಗಾಯನ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷೆ ವಿಜಯಾ ವಿಷ್ಣು ಭಟ್ ಬಸವಣ್ಣನವರ ಜೀವನ ಮತ್ತು ಅವರ ಆದರ್ಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಾಹಿತಿಗಳಾದ ಸ್ನೇಹ ಬಸಮ್ಮ, ಶೋಭಾ ರಕ್ಷಿತ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದಸ್ಯೆ ಸುಮತಿ ಪ್ರಾರ್ಥಿಸಿದರು. ಕಾರ್ಯದರ್ಶಿ ಶರ್ಮಿಳಾ ರಮೇಶ್ ಸ್ವಾಗತಿಸಿದರು. ಜಯಲಕ್ಷ್ಮಿ ವಂದಿಸಿದರು.