ವೀರಾಜಪೇಟೆ, ಮೆ ೧೭: ನಗರದಲ್ಲಿ ಹಿಂದೂ ಪರ ಸಂಘಟನೆ ಗಳಿಂದ ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವದ ಅಂಗ ವಾಗಿ ನಗರದಲ್ಲಿ ಬೈಕ್ ರ‍್ಯಾಲಿ ನಡೆಯಿತು.

ವಿಶ್ವ ಹಿಂದೂ ಪರಿಷದ್, ಭಜರಂಗದಳ ಮತ್ತು ದುರ್ಗಾವಾಹಿನಿ ಮಾತೃ ಮಂಡಳಿ ವೀರಾಜಪೇಟೆ ಪ್ರಖಂಡದ ವತಿಯಿಂದ ವೀರಾಜಪೇಟೆ ನಗರದಲ್ಲಿ ತಾ. ೧೯ ರಂದು ಏರ್ಪಡಿಸಲಾಗಿರುವ ಬೃಹತ್ ಹಿಂದೂ ಸಮಾಜೋತ್ಸವದ ಯಶಸ್ಸಿಗಾಗಿ ನಗರದಲ್ಲಿ ಬೈಕ್ ರ‍್ಯಾಲಿ ನಡೆಯಿತು. ನಗರದ ಚಿಕ್ಕಪೇಟೆ ಶ್ರೀ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಪ್ರಮುಖ ಮಾಳೇಟಿರ ಶ್ರೀನಿವಾಸ್ ಮತ್ತು ಭಜರಂಗದಳ ನಿಕಟಪೂರ್ವ ಅಧ್ಯಕ್ಷ ಸಿ.ಕೆ. ಬೋಪಣ್ಣ ಅವರು ಪೂಜೆ ಸಲ್ಲಿಸುವ ಮೂಲಕ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.

(ಮೊದಲ ಪುಟದಿಂದ) ಕೊಡವ ಸಮಾಜ, ಅಪ್ಪಯ್ಯ ಸ್ವಾಮಿ ರಸ್ತೆ, ತೆಲುಗರ ಬೀದಿ, ಜೈನರ ಬೀದಿ, ಎಫ್.ಎಂ.ಸಿ. ರಸ್ತೆ ಗಣಪತಿ ದೇವಾಲಯ, ಮೀನುಪೇಟೆ ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪಲು ರಸ್ತೆ ಮುಖ್ಯ ಬೀದಿಯಲ್ಲಿ ಜಾಥಾ ಸಾಗಿತು. ಸುಮಾರು ೧ ಗಂಟೆಗೆ ತಾಲೂಕು ಮೈದಾನದಲ್ಲಿ ಸಮಾರೋಪ ಗೊಂಡಿತು. ಬೈಕ್ ಜಾಥಾದಲ್ಲಿ ಸುಮಾರು ೨೦೦ಕ್ಕೂ ಅಧಿಕ ಬೈಕ್ ಸವಾರರು ತಮ್ಮ ವಾಹನದಲ್ಲಿ ಕೇಸರಿ ಧ್ವಜವನ್ನು ಅಲಂಕರಿಸಿ ಘೋಷಣೆ ಕೂಗುತ್ತ ಸಾಗಿದರು.

ವಿಶ್ವ ಹಿಂದೂ ಪರಿಷದ್‌ನ ತಾಲೂಕು ಪ್ರಖಂಡ ಅಧ್ಯಕ್ಷ ಬಿ.ಎಂ. ಕುಮಾರ್ ಮಾತನಾಡಿ, ಬೃಹತ್ ಹಿಂದೂ ಸಮಾವೇಶ ಯಶಸ್ವಿಗಾಗಿ ಬೈಕ್ ರ‍್ಯಾಲಿಯಲ್ಲಿ ನೂರಾರೂ ಸಂಖ್ಯೆ ಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿರುವುದು ಹಿಂದೂ ಶಕ್ತಿಯನ್ನು ಪ್ರದÀರ್ಶನ ಮಾಡಿದೆ. ಮುಂದೆ ನಡೆಯುವ ಕಾರ್ಯಕ್ರಮಕ್ಕೆ ಇದೇ ರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.

ವಿಶ್ವ ಹಿಂದೂ ಪರಿಷದ್ ತಾಲೂಕು ಕಾರ್ಯದÀರ್ಶಿ ಯತೀಶ್ ಮಾತನಾಡಿ, ಜಾಥಾದಿಂದ ಸಂಘಟನೆಗಳ ಸಹಕಾರ, ಕಾರ್ಯ ಕರ್ತರ ಮನೋಬಲ ಹೆಚ್ಚಾಗಿದೆ. ಗುರುವಾರ ನಡೆಯುವ ಬೃಹತ್ ಸಮಾಜೋತ್ಸವದ ಯಶಸ್ಸಿಗಾಗಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರೆ ನೀಡಿದರು.

ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಜಿ, ಜಿಲ್ಲಾ ಕಾರ್ಯಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದÀರ್ಶಿ ಪುದಿಯೊಕ್ಕಡ ರಮೇಶ್, ಭಜರಂಗದಳ ಜಿಲ್ಲಾ ಸಹ ಸಂಚಾಲಕ ವಿವೇಕ್ ರೈ, ನಗರ ಸಹ ಸಂಚಾಲಕ ಐನಂಡ ಕುಶಾಲಪ್ಪ, ನಗರಾಧ್ಯಕ್ಷ ಲೊಕೇಶ್ ಆಚಾರ್ಯ, ಕಾರ್ಯದÀರ್ಶಿ ಗಣೇಶ್, ನಗರ ಸಂಚಾಲಕ ಕಿಸನ್, ಸಹ ಸಂಚಾಲಕ ಅನೇಕ್ ಅಚ್ಚಪ್ಪ ಮತ್ತು ನಗರ ತಾಲೂಕು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ