ಮಡಿಕೇರಿ, ಮೇ ೧೭: ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದು, ಜನರಿಗೆ ಅಗತ್ಯವಾಗಿರುವ ಸೀಮೆ ಎಣ್ಣೆಯನ್ನು ಪೂರೈಸಲು ಕ್ರಮವಹಿಸುವಂತೆ ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಎನ್.ಎ. ರವಿಬಸಪ್ಪ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ವಿಭಿನ್ನ ಹವಾಮಾನ ಹೊಂದಿರುವ ಜಿಲ್ಲೆಯಾಗಿದ್ದು, ಮಳೆಗಾಲದಲ್ಲಿ ಇಲ್ಲಿಯ ಜನರಿಗೆ ಜೀವನ ಮಾಡಲು ಅಕ್ಕಿ ಸೇರಿದಂತೆ ಅವಶ್ಯಕ ವಸ್ತು ಸೀಮೆಎಣ್ಣೆಯಾಗಿದೆ.

ಆದರೆ, ಸುಮಾರು ೬ ತಿಂಗಳಿAದ ಜಿಲ್ಲೆಗೆ ಸೀಮೆಎಣ್ಣೆ ಬಾರದೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಅದು ಅಲ್ಲದೆ ಈಗಾಗಲೇ ಮಳೆಗಾಲ ಮುನ್ಸೂಚನೆ ಕಂಡು ಬರುತ್ತಿದ್ದು, ಜಿಲ್ಲೆಯಲ್ಲಿ ವಿದ್ಯುತ್ ಅಡಚಣೆ ಏರ್ಪಡುತ್ತದೆ. ಇದರಿಂದ ಸೀಮೆಎಣ್ಣೆ ಅವಶ್ಯಕವಿದೆ. ಆದರೆ ಕಂಪೆನಿಯಲ್ಲಿ ಎಣ್ಣೆ ಬೆಲೆ ಹೆಚ್ಚಾಗಿದ್ದು, ದಾಸ್ತಾನು ಇರುವ ಬಗ್ಗೆ ತಿಳಿದು ಬಂದಿದೆ. ಆದರೆ ಜಿಲ್ಲಾಡಳಿತ ಹೆಚ್ಚಾಗಿರುವ ಸೀಮೆಎಣ್ಣೆ ಬೆಲೆಯನ್ನು ನಿಗದಿ ಮಾಡಿದರೆ, ವಿತರಣೆದಾರರು ವಿತರಣೆಗೆ ತಯಾರಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುವಂತೆ ರವಿಬಸಪ್ಪ ಒತ್ತಾಯಿಸಿದ್ದಾರೆ.

ಈ ಬಗ್ಗೆ ಬಹಳಷ್ಟು ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು; ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಉಸ್ತುವಾರಿ ಸಚಿವರಿಗೂ ಪತ್ರ ಬರೆಯಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ೧೦ ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಸಹಕಾರ ಭಾರತೀಯ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಹಳಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಾಗಿದ್ದು, ಅವರುಗಳು ಎಪಿಎಲ್ ಕಾರ್ಡನ್ನು ಹೊಂದಿ ಸರಕಾರದಿಂದ ಸಿಗುವ ಸವಲತ್ತಿನಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.