ಮಡಿಕೇರಿ, ಮೇ ೧೭: ಪೊನ್ನಂಪೇಟೆ ನ್ಯಾಯಾಲಯದಿಂದ ವರ್ಗಾವಣೆಯಾದ ನ್ಯಾಯಾಧೀÃಶ ಗಿರಿಗೌಡ ಅವರಿಗೆ ಪೊನ್ನಂಪೇಟೆ ವಕೀಲರ ಸಂಘದಿAದ ಬೀಳ್ಕೊಡುಗೆ ನೀಡಲಾಯಿತು.
ವಕೀಲರಾದ ಎಸ್.ಡಿ. ಕಾವೇರಪ್ಪ, ಎಂ.ಟಿ. ಕಾರ್ಯಪ್ಪ, ಜಿ.ಎಸ್. ಜೀವನ್, ಅಮೃತ ಸೋಮಯ್ಯ ಅವರು ನ್ಯಾಯಾಧೀಶರ ಸೇವೆ ಬಗ್ಗೆ ಮಾತನಾಡಿದರು.
ಜಿಲ್ಲೆಯಲ್ಲಿ ದೊರಕಿದ ಅನುಭವವನ್ನು ನೆನೆದ ಗಿರಿಗೌಡ ಅವರು, ಇಲ್ಲಿನ ವಕೀಲರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಕೆ.ಡಿ. ಮುತ್ತಪ್ಪ, ಕಾರ್ಯದರ್ಶಿ ಮೋನಿ ಪೊನ್ನಪ್ಪ, ಪದಾಧಿಕಾರಿಗಳು, ಸಂಘದ ಸದಸ್ಯರು ಇದ್ದರು.