ವೀರಾಜಪೇಟೆ, ಮೇ ೧೭: ವೀರಾಜಪೇಟೆಗೂ ಅಪೂರ್ಣ ಕಾಮಗಾರಿಗೂ ಯಾವುದೋ ಅವಿನಾಭಾವ ಸಂಬAಧ ಇರುವಂತೆ ಕಂಡುಬರುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ವೀರಾಜಪೇಟೆ ಉಪಬಂದಿಖಾನೆ ಒಂದು ಬದಿಯ ಕಟ್ಟಡ ಕುಸಿದು ಬಿದ್ದಿತ್ತು. ಅಲ್ಲಿದ್ದ ೧೭ ಜನ ಕೈದಿಗಳನ್ನು ಮಡಿಕೇರಿಯ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅದೇ ಕೊನೆ ಮತ್ತೆ ದಶಕ ಸಮೀಪಿಸುತ್ತಾ ಬಂದರೂ ವೀರಾಜಪೇಟೆ ಸಬ್ ಜೈಲಿನ ಬಾಗಿಲು ಬಂದ್ ಆಗಿಯೇ ಉಳಿದು ಹೋಗಿದೆ.
ಸುಮಾರು ಐವತ್ತಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ವೀರಾಜಪೇಟೆ ಸಬ್ ಜೈಲನ್ನು ಸ್ಥಳಾಂತರಿಸಿ ಆಧುನಿಕತೆಯ ಹೈಫೈ ಸಬ್ ಜೈಲನ್ನು ರೂ.೪.೫೦ ಕೋಟಿ ವೆಚ್ಚದಲ್ಲಿ ನಿರ್ಮಿಸಲು ೨೦೧೯ ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಂದು ವರ್ಷದಲ್ಲಿ ಕಾಮಗಾರಿ ಮುಕ್ತಾಯಗೊಳ್ಳುವುದಾಗಿ ಹೇಳಲಾಗಿತ್ತು.
ಆದರೆ ಕಾಮಗಾರಿ ಪ್ರಾರಂಭ ವಾಗಿ ಮೂರು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಸಬ್ ಜೈಲ್ ಕಾಮಗಾರಿ ಕುಂಟುತ್ತಲೇ ಸಾಗುತ್ತಿದೆ ವಿನಾಃ ಕಟ್ಟಡ ಕೆಲಸ ಮುಗಿಯುತ್ತಿಲ್ಲ.
ಆಧುನಿಕ ಜೈಲ್
ಜೈಲ್ ಪ್ರಾಧಿಕಾರ ಅಂದುಕೊAಡ ಹಾಗೇ ಕಾಮಗಾರಿ ನಡೆದಿದ್ದರೇ ಸುಮಾರು ನೂರು ಮಂದಿ ಕೈದಿಗಳನ್ನು ಇರಿಸಲು ಸಾಮರ್ಥ್ಯ ಹೊಂದಿರುವ, ಅಡುಗೆಮನೆ, ಸ್ನಾನದ ಮನೆ, ಪ್ರತ್ಯೇಕ ಸೆಲ್‌ಗಳು, ದಾಸ್ತಾನು ಕೊಠಡಿ, ಜೊತೆಗೆ ಜೈಲರ್ ಕಚೇರಿ, ಸಂದರ್ಶಕರ ಕೊಠಡಿ ಈ ಆಧುನಿಕ ಸಬ್ ಜೈಲಿನಲ್ಲಿ ನಿರ್ಮಿಸಲು ಯೋಜನೆ ರೂಪಿತವಾಗಿದೆ.
ಈ ಹಿಂದೆ ಇದ್ದ ಜೈಲಿನಲ್ಲಿ ಬರೇ ೨೫ ಕೈದಿಗಳನ್ನು ಇರಿಸಬಹು ದಾಗಿತ್ತು. ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇತ್ತು. ಇದಕ್ಕೆ ನಿರೀಕ್ಷಿತ ಭದ್ರತೆಯೂ ಇರಲಿಲ್ಲ. ಕಚೇರಿ ಹಾಗೂ ಗಾರ್ಡ್ ಗಳಿಗೆ ಸ್ಥಳಾವಕಾಶ ಕಡಿಮೆ ಇತ್ತು.
ಜೈಲ್‌ಗಾಗಿ ಹೋರಾಟ
೨೦೧೪ ರಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಹಳೆ ತಾಲೂಕು ಕಚೇರಿ ಜಾಗವನ್ನು ಜೆಸಿಬಿಯಿಂದ ಸಮತಟ್ಟು ಮಾಡುವಾಗ ಆಕಸ್ಮಿಕ ವಾಗಿ ಜೆಸಿಬಿ ಯಂತ್ರದಿAದ ಸಬ್ ಜೈಲಿನ ಒಂದು ಭಾಗದ ಗೋಡೆ ಜಖಂಗೊAಡಿತ್ತು. ಇದನ್ನು ಸರಿ ಪಡಿಸಲು ಸಂಬAಧಿತ ಪ್ರಾಧಿಕಾರಕ್ಕೆ ಸಾಧ್ಯವಾಗದ ಕಾರಣ ಶಿಥಿಲಾವಸ್ಥೆ ಯಲ್ಲಿಯೇ ಇತ್ತು.
(ಮೊದಲ ಪುಟದಿಂದ) ಬೆಂಗಳೂರಿನ ಕೇಂದ್ರ ಕಾರಾಗೃಹದ ಡಿಐಜಿ ಅವರು ವೀರಾಜಪೇಟೆಯಲ್ಲಿರುವ ಈ ಸಬ್ ಜೈಲನ್ನು ಕೆ.ಆರ್ ನಗರದ ಸಬ್ ಜೈಲಿನೊಂದಿಗೆ ವಿಲೀನಗೊಳಿಸುವಂತೆ ಆದೇಶಿಸಿದ್ದರು.
ವೀರಾಜಪೇಟೆಯಲ್ಲಿ ಸುಮಾರು ಐದಾರು ದಶಕಗಳಿಂದಿರುವ ಈ ಸಬ್ ಜೈಲನ್ನು ಕೆ.ಆರ್ ನಗರದ ಜೊತೆ ವಿಲೀನಗೊಳಿಸಲು ಇಲ್ಲಿನ ವಕೀಲರ ಸಂಘ ಹಾಗೂ ವಿವಿಧ ಜನಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ವೀರಾಜಪೇಟೆಯಲ್ಲಿಯೇ ಹೊಸ ಸಬ್ ಜೈಲ್ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡಿದ್ದವು.
ಜೈಲಿನಿAದ ಪ್ರಯೋಜನಗಳು
ವೀರಾಜಪೇಟೆ ತಾಲೂಕಿನ ಪೊಲೀಸ್ ಠಾಣೆ ಸಮುಚ್ಛಯಗಳು ಹಾಗೂ ನ್ಯಾಯಾಲಯ ಸಮುಚ್ಚಯಗಳಿಗೆ ಅನುಕೂಲವಾಗಲಿದೆ. ವೀರಾಜಪೇಟೆ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕಿನ ಒಟ್ಟು ಐದು ನ್ಯಾಯಾಲಯಗಳು, ಏಳು ಪೊಲೀಸ್ ಠಾಣೆಗಳು ಜೊತೆಗೆ ಅರಣ್ಯ ವಲಯಗಳು, ಅಬಕಾರಿ, ಮೊಕದ್ದಮೆಗಳಲ್ಲಿ ಬಂದಿತ ಆರೋಪಿಗಳು ಇರುವುದರಿಂದ ಇಲ್ಲಿಗೆ ಉಪಬಂದಿಖಾನೆ ಅತ್ಯಂತ ಅಗತ್ಯವಾಗಿದೆ. ವೀರಾಜಪೇಟೆಯಲ್ಲಿ ಉಪಬಂದಿಖಾನೆ ಇಲ್ಲದ ಕಾರಣ ಪೊಲೀಸ್ ಸಿಬ್ಬಂದಿಗಳು ವಿಚಾರಣಾಧೀನ ಕೈದಿಗಳನ್ನು ಮಡಿಕೇರಿಯ ಕರ್ಣಂಗೇರಿಯ ಕಾರಾಗೃಹದಿಂದ ಕರೆತಂದು ಪುನಃ ಕೈದಿಗಳನ್ನು ಅಲ್ಲಿಗೆ ಬಿಡಲು ಹೊತ್ತು ಗೊತ್ತಿಲ್ಲದೆ ಹರಸಾಹಸ ಪಡಬೇಕಾಗಿದೆ.
ಅಪರಾಧಿಗಳನ್ನು, ಆರೋಪಿತರನ್ನು ಕರೆದೊಯ್ಯಲು ಸಿಬ್ಬಂದಿಗಳ ಕೆಲಸ ಇಡೀ ದಿನ ವ್ಯರ್ಥವಾಗುತ್ತಿದ್ದು. ಇದು ಇಲಾಖೆಗೆ ದೊಡ್ಡ ಹೊರೆಯಾಗಿಯೂ ಪರಿಣಮಿಸಿದೆ. ಬರೇ ಪೊಲೀಸರು ಮಾತ್ರವಲ್ಲ, ಆರೋಪಿಗಳು, ಅಪರಾಧಿಗಳ ಸಂಬAಧಿಕರು ಇವರಿಗಾಗುತ್ತಿರುವ ತೊಂದರೆಯನ್ನು ಗಮನಿಸುತ್ತಿದ್ದರೆ ಪ್ರತಿ ಬಾರಿ ವೀರಾಜಪೇಟೆಯಿಂದ ಕುಟ್ಟ ಮೂಲದವರೆಗೆ ಆರೋಪಿಗಳನ್ನು ಭೇಟಿಯಾಗಬೇಕಾದರೆ ಮಡಿಕೇರಿ ಜೈಲಿಗೆ ಅಲೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದುವೇಳೆ ವೀರಾಜಪೇಟೆ ಉಪಬಂಧಿಖಾನೆ ಕಾಮಗಾರಿ ಪೂರ್ಣವಾದರೆ ಇವರೆಲ್ಲರ ಹೊರೆ ಕಡಿಮೆಯಾಗುತ್ತದೆ.
ವೀರಾಜಪೇಟೆ ವಕೀಲರ ಸಂಘವೂ ಬಹಳ ಹಿಂದಿನಿAದಲೂ ವೀರಾಜಪೇಟೆಗೆ ಉಪಬಂದಿಖಾನೆಯ ಅಗತ್ಯವನ್ನು ಹೇಳುತ್ತಲೇ ಬಂದಿದ್ದರೂ ಸರ್ಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಿದರೂ ಎಂಟು ವರ್ಷಗಳ ಹಿಂದೆ ಶಿಥಿಲಗೊಂಡ ಸಬ್ ಜೈಲ್ ಇಂದಿಗೂ ಹೊಸ ಕಾಮಗಾರಿ ಹೆಸರಿನಲ್ಲಿ ನೆನೆಗುದಿಗೆ ಬಿದ್ದಿರುವುದು ಬಿಟ್ಟರೇ ಬೇರೆ ಪ್ರಯೋಜನವಾಗಿಲ್ಲ.
ಕೈದಿಗಳನ್ನು ಹಾಜರುಪಡಿಸುವುದು ಕಷ್ಟ
ಕೈದಿಗಳನ್ನು ಪ್ರತಿ ಬಾರಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದೆ ಸವಾಲಿನ ಕೆಲಸ ಆಗಿದೆ. ಪೊಲೀಸ್ ಇಲಾಖೆಗೆ. ಮಡಿಕೇರಿ ಕಾರಾಗೃಹದಿಂದ ವೀರಾಜಪೇಟೆ ಇಲ್ಲವೇ ಪೊನ್ನಂಪೇಟೆ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಬೇಕು. ಇದಕ್ಕೆ ದುಬಾರಿ ವೆಚ್ಚವೂ ತಗುಲುತ್ತಿದೆ. ಪ್ರತಿ ಬಾರಿ ನ್ಯಾಯಾಲಯದಲ್ಲಿ ವಿಚಾರಣೆ ಇದ್ದಾಗ ಸಂಬAಧಪಟ್ಟ ಆರೋಪಿಯನ್ನು ಹಾಜರುಪಡಿಸುವಾಗ ಸಶಸ್ತç ಮೀಸಲು ಪಡೆಯಭದ್ರತೆಯ ಜೊತೆಗೆ ಕರೆದುಕೊಂಡು ಬರಬೇಕಾಗುತ್ತದೆ. ಭದ್ರತೆಯಿಲ್ಲದೆ ಕರೆದುಕೊಂಡು ಬರಲಾಗುವುದಿಲ್ಲ. ಅವರು ಬಂದ ದಿನ ಅವರಿಗೆ ಶಿಕ್ಷೆ ಪ್ರಕಟವಾಗುತ್ತದೆಯೋ, ಜಾಮೀನು ಸಿಗುವುದೋ, ಬಿಡುಗಡೆಯೋ, ಮತ್ತೆನೋ ಕಾನೂನು ಪ್ರಕ್ರಿಯೆಗಳಾಗುತ್ತವೆ. ಅವರಿಗೆ ಓಡಾಟವೇ ಆಗುತ್ತದೆ ಕಾನೂನು ಪ್ರಕಟಿಸಿದ ಸೂಚನೆಗಳನ್ನು ಸಮಯಕ್ಕೆ ಸರಿಯಾಗಿ ಮಾಡಲಾಗುವುದಿಲ್ಲ. ನ್ಯಾಯ ದೊರೆಯುವಲ್ಲಿ ವಿಳಂಬವಾಗುತ್ತಿದೆ. ಅಲ್ಲದೇ ನ್ಯಾಯಾಲಯದ ಸಮಯ, ಪೊಲೀಸರ ಶ್ರಮ, ವಕೀಲರ ಶ್ರಮ, ದೂರದ ಊರಿಂದ ಬರುವ ಸಾಕ್ಷಿಗಳ ಸಮಯ ಎಲ್ಲವೂ ವ್ಯರ್ಥವಾಗುತ್ತಿದೆ.
ಆರೋಪಿಗಳು ಕುಟ್ಟ ಅಥವಾ ಶ್ರೀಮಂಗಲದAತಹ ದೂರದ ಊರಿನವರಾದಾಗ ಅವರ ಬಂಧನ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುವಲ್ಲಿಗೆ ಪೊಲೀಸರಿಗೆ ಸಾಕಷ್ಟು ತಾಂತ್ರಿಕ ಅಡಚಣೆಗಳು ಆಗುತ್ತಿವೆ. ಕುಟ್ಟದಿಂದ ಮಡಿಕೇರಿಗೆ ಸುಮಾರು ನೂರು ಕಿಲೋಮೀಟರ್ ಅಂತರವಿದೆ.
ಪೂರ್ಣಗೊಳ್ಳಬೇಕಾದ ಅನಿವಾರ್ಯತೆ
ವಿಚಾರಣಾಧೀನ ಕೈದಿಗಳನ್ನು ಕುಟುಂಬದವರು ಭೇಟಿಯಾಗಿ ಅವರಿಗೆ ಅಗತ್ಯ ಕಾನೂನು ನೆರವು ಒದಗಿಸಲು ಕುಟುಂಬದವರು ಮಡಿಕೇರಿ ಬಂದಿಖಾನೆಗೆ ಬರಬೇಕಾಗುತ್ತದೆ.
ಉಪಬಂಧಿಖಾನೆ, ಉಸ್ತುವಾರಿ ಎಲ್ಲವೂ ಪೊಲೀಸ್ ಹೌಸಿಂಗ್ ಕಾರ್ಪೋರೇಶನ್ ಅಡಿಯಲ್ಲಿ ಬರುತ್ತದೆ. ಇದು ಕೂಡಾ ಸರ್ಕಾರದ ಒಂದು ಅಂಗಸAಸ್ಥೆಯೇ ಆಗಿದೆ. ಹಾಗಿದ್ದೂ ಈ ಕಾಮಗಾರಿ ನೆನೆಗುದಿಗೆ ಬಿದ್ದಿರುವುದು, ಈ ಉಪಬಂದಿಖಾನೆ ಕೆಲಸ ನೋಡಿಕೊಳ್ಳುತ್ತಿದ್ದ ಜೈಲರ್ ರಮೇಶ್ ವರ್ಗಾವಣೆಯಾಗಿ ತಿಂಗಳುಗಳೇ ಕಳೆಯುತ್ತಾ ಬಂದಿದ್ದರೂ ಕಟ್ಟಡ ಕಾಮಗಾರಿ ನೋಡಿಕೊಳ್ಳಲು ಮತ್ತೊಬ್ಬರ ನೇಮಕವಾಗಿಲ್ಲ.
ನ್ಯಾಯಾಲಯಕ್ಕೆ, ಪೊಲೀಸ್ ಠಾಣೆಗೆ, ಬಂದಿಖಾನೆಗೆ ಅಲೆದಲೆದು ಆರೋಪಿತರ ಕುಟುಂಬಸ್ಥರ ಚಪ್ಪಲಿಗಳು ಸವೆಯುತ್ತಿವೆ ಅಷ್ಟೇ ಉಪಬಂದಿಖಾನೆ ಕಾಮಗಾರಿ ಮಾತ್ರ ನಿಂತಲ್ಲಿಯೇ ನಿಂತುಹೋಗಿದೆ. ವಿಧಾನಸಭಾ ಕ್ಷೇತ್ರವಾಗಿರುವ ವೀರಾಜಪೇಟೆಯಲ್ಲಿ ಹೀಗೆ ವಿಳಂಬಿತ ಕಾಮಗಾರಿಗಳ ಪಟ್ಟಿಯೇ ಸಿಗುತ್ತದೆ. ಆದಷ್ಟು ಬೇಗ ಸಂಬAಧಪಟ್ಟವರು ಎಚ್ಚೆತ್ತುಕೊಂಡು ಉಪಬಂದಿಖಾನೆ ಕಾಮಗಾರಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆ ಎರಡೂ ಇದೆ.