ಮಡಿಕೇರಿ, ಮೇ ೧೭: ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕೊಡಗು ಘಟಕದ ವತಿಯಿಂದ ರೂ. ೬೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶತಮಾನೋತ್ಸವ ಭವನ ಕಟ್ಟಡ ಉದ್ಘಾಟನೆ ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಗೆ ನೆರವೇರಲಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪ ಸಂದರ್ಭ ಸಾಕಷ್ಟು ಪರಿಹಾರ ಸಾಮಗ್ರಿಗಳು ರೆಡ್‌ಕ್ರಾಸ್ ಸಂಸ್ಥೆ ಮೂಲಕ ಬಂದಿತ್ತು. ಆದರೆ ಅವುಗಳನ್ನು ದಾಸ್ತಾನು ಮಾಡಲು ಕಟ್ಟಡದ ಕೊರತೆ ಇತ್ತು. ಇದರೊಂದಿಗೆ ಸಾರ್ವಜನಿಕ ಸೇವೆಗಾಗಿ ವಿವಿಧ ತರಬೇತಿಗಳನ್ನು ನೀಡಲು ಕೂಡ ಕಟ್ಟಡದ ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಟ್ಟಡವನ್ನು ಸ್ಟೀವರ್ಟ್ಹಿಲ್‌ನಲ್ಲಿ ನಿರ್ಮಿಸಲಾಗಿದ್ದು, ಕಟ್ಟಡದ ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಟ್ಟಡವನ್ನು ಸ್ಟೀವರ್ಟ್ಹಿಲ್‌ನಲ್ಲಿ ನಿರ್ಮಿಸಲಾಗಿದ್ದು, ಅಪ್ಪಚ್ಚುರಂಜನ್ ವಹಿಸಲಿದ್ದು, ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುಜಾ ಕುಶಾಲಪ್ಪ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ರವೀಂದ್ರ ರೈ ಮಾಹಿತಿಯಿತ್ತರು.
ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಮುರಳೀಧರ್ ಮಾತನಾಡಿ, ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ರೆಡ್‌ಕ್ರಾಸ್‌ನ ಕೆಲ ಹಿರಿಯ ಸದಸ್ಯರನ್ನು ಸನ್ಮಾನಿಸ ಲಾಗುತ್ತದೆ. ರಾಜ್ಯದೆಲ್ಲೆಡೆ ಯಿಂದ ಯೂತ್ ರೆಡ್‌ಕ್ರಾಸ್‌ನ ವಿದ್ಯಾರ್ಥಿಗಳು ಸಂಗ್ರಹಿಸಿದ ೨೯ ಲಕ್ಷ ಹಣ ಹಾಗೂ ಸರ್ಕಾರ ಮಟ್ಟದಿಂದ ಬಂದ ಹಣವನ್ನು ಬಳಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರಲ್ಲದೆ, ಜೂನ್ ೪ ರಂದು ಆರೋಗ್ಯ
(ಮೊದಲ ಪುಟದಿಂದ) ಇಲಾಖೆ ಸಹಕಾರದೊಂದಿಗೆ ರಕ್ತದಾನ ಶಿಬಿರ ನಡೆಸುವ ಚಿಂತನೆ ಇದೆ ಎಂದರು. ಯೂತ್ ರೆಡ್‌ಕ್ರಾಸ್ ಪ್ರಮುಖ ಎಂ. ಧನಂಜಯ ಮಾತನಾಡಿ, ವೈದ್ಯಕೀಯ ಕಾಲೇಜು ಸೇರಿದಂತೆ ಜಿಲ್ಲೆಯ ೨೩ ಕಾಲೇಜುಗಳಲ್ಲಿ ಯೂತ್‌ರೆಡ್‌ಕ್ರಾಸ್ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. ರೆಡ್‌ಕ್ರಾಸ್‌ನ ಜಿಲ್ಲಾ ಉಪ ಸಭಾಪತಿ ಎಚ್.ಟಿ. ಅನಿಲ್ ಮಾತನಾಡಿ, ಕೊಡಗು ರೆಡ್‌ಕ್ರಾಸ್ ಘಟಕಕ್ಕೆ ರಾಜ್ಯ ಘಟಕದಿಂದ ೬ ಲಕ್ಷ ಮಾಸ್ಕ್ಗಳು ಬಂದಿದ್ದು, ಅವುಗಳನ್ನು ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ಸದ್ಯದಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕೋಶಾಧಿಕಾರಿ ಶ್ಯಾಂಜೋಸೆಫ್ ಉಪಸ್ಥಿತರಿದ್ದರು.