ಮಡಿಕೇರಿ, ಮೇ ೧೮: ಶ್ರೀಮಂಗಲನಾಡುವಿನ ಟಿ. ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘದ ೩ನೇ ವಾರ್ಷಿಕ ಸಂತೋಷಕೂಟ ಕಾರ್ಯಕ್ರಮ ತಾ. ೨೯ ರಂದು ಜರುಗಲಿದೆ. ಅಂದು ಬೆಳಿಗ್ಗೆ ೧೦.೩೦ಕ್ಕೆ ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ವಿವಿಧ ಕಾರ್ಯಕ್ರಮ ಜರುಗಲಿದೆ.
ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲ, ಮಾಜಿ ಅಡ್ವೊಕೇಟ್ ಜನರಲ್, ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಎಂಎಲ್‌ಸಿ ಎಂ.ಪಿ. ಸುಜಾಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರುಗಳಾಗಿ ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ (ನಿವೃತ್ತ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲಚೀರ ಎ. ಅಯ್ಯಪ್ಪ, ವೀರಾಜಪೇಟೆ ತಹಶೀಲ್ದಾರ್ ಆರ್. ಯೋಗಾನಂದ ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಪಾಲ್ಗೊಳ್ಳಲಿದ್ದಾರೆ.
ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಆಟೋಟ ಕಾರ್ಯಕ್ರಮ ಈ ಸಂದರ್ಭ ಜರುಗಲಿದೆ. ೨೦೧೮-೧೯ ಹಾಗೂ ೨೦೧೯-೨೦ನೇ ಸಾಲಿನಲ್ಲಿ ಮಾಜಿ ಸೈನಿಕರ ಪ್ರತಿಭಾನ್ವಿತ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಡಿಗ್ರಿಯಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ತಾ. ೨೫ರೊಳಗೆ ಸಂಘದ ಕಚೇರಿಗೆ ತಲುಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಬಿ. ಸುರೇಶ್ (ಮೊ. ೯೪೪೮೮೧೩೮೩೩) ಅವರನ್ನು ಸಂಪರ್ಕಿಸಬಹುದಾಗಿದೆ.
ಅದೇ ದಿನ ಅಪರಾಹ್ನ ಊಟೋಪಚಾರದ ಬಳಿಕ ಪುರುಷರು, ಮಹಿಳೆಯರು, ಮಕ್ಕಳಿಗೆ ಆಟೋಟ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.