ಕೊಡ್ಲಿಪೇಟೆ, ಮೇ ೧೭: ಇಲ್ಲಿನ ಶ್ರೀರಾಮಲಿಂಗ ಚೌಡೇಶ್ವರಿ ದೇವಾಲಯದ ೧೧ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯೊಂದಿಗೆ ಹಲವು ಧಾರ್ಮಿಕ ಕೈಂಕರ್ಯಗಳ ಮೂಲಕ ನೆರವೇರಿತು. ಪ್ರಧಾನ ಅರ್ಚಕ ಮಹಾಬಲೇಶ್ವರ ಜೋಷಿ ಅವರ ಪೌರೋಹಿತ್ವದಲ್ಲಿ, ದೇವಾಲಯದಲ್ಲಿ ದುರ್ಗಾಹೋಮ, ಅಭಿಷೇಕ, ಅಲಂಕಾರ, ರಂಗಪೂಜೆ, ದೇವಾಂಗ ಸಮುದಾಯ ಬಾಂಧವ ರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ, ದುರ್ಗಾರತಿ, ಸಾಮೂಹಿಕ ಪ್ರಾರ್ಥನೆ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು.