ಗೋಣಿಕೊಪ್ಪ ವರದಿ, ಮೇ. ೧೬ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ತಂಬುಕುತ್ತಿರ ಹಾಗೂ ಮುಕ್ಕಾಟೀರ (ಮಾದಾಪುರ) ತಂಡಗಳು ಸೆಮಿಫೈನಲ್ ಪ್ರವೇಶ ಪಡೆದುಕೊಂಡಿತು.

ಸೆಮಿ ಫೈನಲ್‌ಗೆ : ತಂಬುಕುತ್ತಿರ ತಂಡವು ಅಚ್ಚಪಂಡವನ್ನು ೪೪ ರನ್‌ಗಳಿಂದ ಗೆದ್ದು ಸಾಧನೆ ಮಾಡಿತು. ತಂಬುಕುತ್ತಿರ ೪ ವಿಕೆಟ್ ಕಳೆದುಕೊಂಡು ೮೦ ರನ್ ಸಿಡಿಸಿತು. ಅಚ್ಚಪಂಡ ೫.೩ ಓವರ್‌ಗಳಲ್ಲಿ ೩೬ ರನ್‌ಗೆ ಸರ್ವಪಥನಗೊಂಡಿತು. ತಂಬುಕುತ್ತಿರ ಶರಣು ೧ ಓವರ್ ಬೌಲ್ ಮಾಡಿ ಕೇವಲ ೧ ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಇದು ತಂಬುಕುತ್ತೀರಕ್ಕೆ ಜಯ ತಂದುಕೊಟ್ಟಿತು. ಅಚ್ಚಪಂಡ ಬೋಪಣ್ಣ ೧೬ ರನ್, ಅಚ್ಚಪಂಡ ಮಿಥುನ್ ೧ ವಿಕೆಟ್ ಸಾಧನೆ ಮಾಡಿದರು. ತಂಬುಕುತ್ತಿರ ಶರಣು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

೨ ನೇ ಕ್ವಾರ್ಟರ್ ಫೈನಲ್‌ನಲ್ಲಿ ಮುಕ್ಕಾಟೀರ (ಮಾದಾಪುರ) ತಂಡವು ಐಚಂಡವನ್ನು ೮ ರನ್‌ಗಳಿಂದ ಸೋಲಿಸಿ ಮುನ್ನಡೆ ಕಾಯ್ದುಕೊಂಡಿತು. ಐಚಂಡ ಮೊದಲು ಬ್ಯಾಟ್ ಮಾಡಿ ೫ ವಿಕೆÀಟ್ ನಷ್ಟಕ್ಕೆ ೫೯ ರನ್ ದಾಖಲಿಸಿತು. ಮುಕ್ಕಾಟೀರ ೨ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಐಚಂಡ ಸ್ವಯಂ ೨೭ ರನ್, ಸದಾ ೧ ವಿಕೆಟ್ ಪಡೆದರು. ಮುಕ್ಕಾಟೀರ ಬೋಪಣ್ಣ ೧ ಓವರ್‌ನಲ್ಲಿ ೩ ರನ್ ನೀಡಿ ಪ್ರಮುಖ ೨ ವಿಕೆಟ್ ಕಬಳಿಸಿದರು. ಮುಕ್ಕಾಟೀರ ದೀಪಕ್ ೨೫ ರನ್ ಗಳಿಸಿದರು.

ಪ್ರೀ ಕ್ವಾರ್ಟರ್ ಫಲಿತಾಂಶ : ಮಂಡುವAಡ ತಂಡವು ಚಾಂಪಿಯನ್ ಕಳಕಂಡ ತಂಡವನ್ನು ೩೬ ರನ್‌ಗಳಿಂದ ಮಣಿಸಿತು. ಮಂಡುವAಡ ೨ ವಿಕೆಟ್ ನಷ್ಟಕ್ಕೆ ೭೩ ರನ್ ಸಂಪಾದಿಸಿತು. ಕಳಕಂಡ ನಿಗದಿತ ೬ ಓವರ್‌ಗಳಲ್ಲಿ ಪ್ರಮುಖ ೩ ವಿಕೆಟ್ ಕಳೆದುಕೊಂಡು ೩೭ ರನ್‌ಗಳಿಗೆ ಕುಸಿಯಿತು. ಮಂಡುವAಡ ದರ್ಶನ್ ೩೯ ರನ್ ಸಿಡಿಸಿದರು. ಮಂಡುವAಡ ಹರ್ಷಿತ್ ೨ ಓವರ್‌ಗಳಲ್ಲಿ ೨ ವಿಕೆಟ್ ಪಡೆದು ಕೇವಲ ೧೧ ರನ್ ನೀಡಿದರು. ಕಳಕಂಡ ಪ್ರಸನ್ನ ೧ ವಿಕೆಟ್ ಪಡೆದರು. ಮಂಡುವAಡ ದರ್ಶನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಬೊಟ್ಟಂಗಡ, ಅಳಮೇಂಗಡ ನಡುವಿನ ಪಂದ್ಯ ಹಾಗೂ ಚೆಕ್ಕೇರ ಮತ್ತು ಮಂಡುವAಡ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಗಳು ಮಳೆಯಿಂದಾಗಿ ಮಂಗಳವಾರಕ್ಕೆ ಮುಂದೂಡಲ್ಪಟ್ಟಿದೆ. ಸೆಮಿ ಫೈನಲ್ ಪಂದ್ಯಗಳು ಮಂಗಳವಾರ ನಡೆಯಬೇಕಿದ್ದು, ಮಳೆ ವಿರಾಮ, ಮೈದಾನ ವ್ಯವಸ್ಥೆ ಸರಿಪಡಿಸಿಕೊಂಡು ಪಂದ್ಯ ನಡೆಸಲು ನಿರ್ಧರಿಸಲಾಗಿದೆ.