ಗೋಣಿಕೊಪ್ಪಲು, ಮೇ ೧೭: ಕಳೆದ ೫೦ ವರ್ಷದಿಂದ ಅಸ್ತಿತ್ವದಲ್ಲಿ ರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿAದ ರಾಜ್ಯದ ಪತ್ರಕರ್ತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಆದರೆ, ನಮ್ಮ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದು ಕೇವಲ ಮೂರು ವರ್ಷವಾಗಿದ್ದು ಶಿವಮೊಗ್ಗದ ೧೨ ಪತ್ರಕರ್ತರಿಗೆ ಮೊದಲ ಹಂತದಲ್ಲಿ ಮನೆ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ನಿವೇಶನ, ವಿಮಾ ಯೋಜನೆ, ಆರೋಗ್ಯ ಕಾರ್ಡ್, ಬಸ್ ಪಾಸ್, ಪಿಂಚಣಿ ಒಳಗೊಂಡAತೆ ಹಲವು ಯೋಜನೆಗಳನ್ನು ಅರ್ಹರಿಗೆ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ.

ಪತ್ರಕರ್ತರ ಸಂಘಗಳಲ್ಲಿ ಅಧಿಕಾರ ಶಾಹಿತ್ವ, ಜಾತಿ ರಾಜಕಾರಣ ಅಧಿಕವಾಗುತ್ತಿದ್ದು ಪ್ರಾಮಾಣಿಕ ಕಾರ್ಯನಿರತ ಪತ್ರಕರ್ತರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ವೆಂಕಟೇಶ್ ಬೋವಿ ವಿಷಾಧಿಸಿದರು.

ಸಂಘದ ಕೊಡಗು ಶಾಖೆ ವತಿಯಿಂದ ಪೊನ್ನಂಪೇಟೆ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ಜರುಗಿದ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪತ್ರಿಕಾ ವಿತರಕರು ಅಸಂಘಟಿತ ಕಾರ್ಮಿಕರಾಗಿದ್ದು ಕಾರ್ಮಿಕ ಇಲಾಖೆ ಯಲ್ಲಿ ಹಲವು ಯೋಜನೆಗಳಿವೆ. ಆದರೆ, ಈವರೆಗೆ ರಾಜ್ಯದ ಸಂಘ ಪ್ರಾಮಾಣಿಕ ಪ್ರಯತ್ನ ಮಾಡದ ಹಿನ್ನೆಲೆ ವಿತರಕರು ಸರ್ಕಾರಿ ಯೋಜನೆಯಿಂದ ವಂಚಿತರಾಗಿದ್ದಾರೆ. ಶೀಘ್ರವೇ ಕಾರ್ಮಿಕ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ ರಾಜ್ಯದ ಪತ್ರಿಕಾ ವಿತರಕರಿಗೂ ನ್ಯಾಯ ದೊರಕಿಸಲು ಪ್ರಯತ್ನಿಸಲಾಗುವದು ಎಂದರು. ಪತ್ರಕರ್ತರ ಮಾನ್ಯತಾ ಪತ್ರ (ಅಕ್ರಿಡೇಷನ್ ಕಾರ್ಡ್) ರೂ. ೫೦ ಸಾವಿರದವರೆಗೂ ಮಾರಾಟ ವಾಗುತ್ತಿದೆ. ಮಂತ್ರಿಗಳಿಗೆ, ಅಧಿಕಾರಿ ಗಳೊಂದಿಗೆ ಶಾಮಿಲಾಗಿರುವವರಿಗೆ ಕಾರ್ಡ್ ಸಿಗುತ್ತಿದೆೆ. ಮಾನ್ಯತಾ ಪತ್ರ ಸಿಗದೆ ಇರುವದರಿಂದ ಗ್ರಾಮೀಣ ಭಾಗದ ಪತ್ರಕರ್ತರು ಬಸ್ ಪಾಸ್, ಇತ್ಯಾದಿ ಸರ್ಕಾರಿ ಸೌಲಭ್ಯದಿಂದ ವಂಚಿತವಾಗುತ್ತಿದ್ದಾರೆ. ಈ ಬಗ್ಗೆಯೂ ಮಾಹಿತಿ ಹಕ್ಕು ಮೂಲಕ ಸತ್ಯಾಂಶ ಶೋಧನೆಗಾಗಿ ಎಲ್ಲ ವಿವರಣೆಯನ್ನೂ ಕೇಳುತ್ತಿದ್ದೇನೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬೆಂಗಳೂರಿನಲ್ಲಿ ಒಂದು ಎಕರೆ ನಿವೇಶನ ಹಾಗೂ ರೂ.೩ ಕೋಟಿ ಅನುದಾನ ನೀಡಿದೆ. ಈ ಹಣದ ಬಗ್ಗೆ ಇಂದು ಮಾಹಿತಿಯೂ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಕಾರ್ಯನಿರತ ಪತ್ರಕರ್ತರ ಕಾರ್ಯಕ್ರಮಗಳಿಗೆ ನೀಡುತ್ತಿರುವ ಲಕ್ಷಾಂತರ ಹಣವನ್ನೂ ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆಯೂ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸಂಘದ ಅವ್ಯವಸ್ಥೆಯಿಂದ ಬೇಸತ್ತು ತಾನು ನೂತನ ಸಂಘ ಸ್ಥಾಪನೆ ಮಾಡಿರುವದಾಗಿ ಹೇಳಿದರು.

ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಜಿ.ಎಸ್. ಪುಷ್ಪಲತಾ ಮಾತನಾಡಿ, ಪತ್ರಕರ್ತರಲ್ಲಿ ಒಗ್ಗಟ್ಟು, ಪ್ರಾಮಾಣಿಕತೆಯ ಕೊರತೆ ಹೆಚ್ಚಾಗುತ್ತಿದೆ. ಕೊಡಗು ಜಿಲ್ಲೆ ಯಲ್ಲಿಯೂ ಮಹಿಳಾ ಪತ್ರಕರ್ತೆಯರ ಘಟಕ ಸ್ಥಾಪನೆ ಆಗಬೇಕು ಎಂದರು.

ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಡಿ.ಕೆ. ಶ್ರೀಧರ್ ಮಾತನಾಡಿ, ಬೆಂಗಳೂರಿನಲ್ಲಿ ನಮ್ಮ ಸಂಘವು ಒಂದು ಎಕರೆ ಜಾಗದಲ್ಲಿ ಸಮುದಾಯ ಭವನ, ವಿವಿಧ ಜಿಲ್ಲೆಗಳಿಂದ ಬರುವ ಪತ್ರಕರ್ತರಿಗೆ ವಸತಿ ವ್ಯವಸ್ಥೆ ಇತ್ಯಾದಿ ಪೂರಕ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸಿದ್ಧತೆ ನಡೆಸಿದೆ. ಕೊಡಗು ಜಿಲ್ಲೆಯಲ್ಲಿ ಮೊದಲ ಜಿಲ್ಲಾ ಮಟ್ಟದ ಶಾಖೆ ಆರಂಭಗೊAಡಿದ್ದು ಮುಂದೆ ಶಿವಮೊಗ್ಗ, ಭದ್ರಾವತಿ, ಮಂಗಳೂರು ವಿನಲ್ಲಿಯೂ ನಮ್ಮ ಜಿಲ್ಲಾ ಶಾಖೆಗಳು ಆರಂಭವಾಗಲಿವೆ ಎಂದರು.

ಕಸಾಪ ಅಧ್ಯಕ್ಷ ಎಂ.ಪಿ.ಕೇಶವ್ ಕಾಮತ್ ಅವರು ಸನ್ಮಾನ ಸ್ವೀಕರಿಸಿ, ಕೊಡಗು ಜಿಲ್ಲೆಯಲ್ಲಿ ಇದೀಗ ಒಂದು ಸಂಘ ನಿಷ್ಕಿçÃಯವಾಗುವ ಹಂತ ತಲುಪಿದೆ. ತಾ. ೨೦ ರಂದು ಮಡಿಕೇರಿಯಲ್ಲಿ ಮತ್ತೊಂದು ಸಂಘ ಅಸ್ತಿತ್ವಕ್ಕೆ ಬರಲಿದೆ. ಜಿಲ್ಲೆಗೆ ೨-೩ ಸಂಘಗಳ ಅಗತ್ಯವಿಲ್ಲ. ನಾವೆಲ್ಲರೂ ಒಗ್ಗೂಡಿ ಒಂದೇ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕೊಡಗು ಶಾಖೆಯ ಕಾನೂನು ಸಲಹೆಗಾರ ಚಿಮ್ಮಂಗಡ ಕೆ. ಪೂವಣ್ಣ ಮಾತನಾಡಿ, ಪತ್ರಕರ್ತರು ನಿಷ್ಪಕ್ಷ ಪಾತವಾಗಿ, ಕಾನೂನು ಚೌಕಟ್ಟಿನಲ್ಲಿ ವರದಿ ಮಾಡಬೇಕಾಗಿದೆ. ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ ವಾಗಿದೆ. ಜನಸಾಮಾನ್ಯರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಪತ್ರಕರ್ತರು ಕರ್ತವ್ಯ ನಿರ್ವಹಿಸಬೇಕು. ಪತ್ರಕರ್ತರಿಗೆ ಅಗತ್ಯ ಬಿದ್ದಲ್ಲಿ ಉಚಿತ ಕಾನೂನು ಸಲಹೆ ನೀಡಲು ತಾನು ಬದ್ಧ ಎಂದು ನುಡಿದರು.

ಕೊಡಗು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ರಾಜ್ಯ ಸಂಘ ಕೊಡಗು ಜಿಲ್ಲೆಯನ್ನು ಕಡೆಗಣನೆ ಮಾಡಿದೆ. ತಾನು ರಾಜ್ಯ ಸಂಘದ ಸದಸ್ಯನಾಗಿದ್ದೆ. ಪತ್ರಕರ್ತರಿಗೆ ಕನಿಷ್ಟ ಭದ್ರತೆ, ಸರ್ಕಾರಿ ಸವಲತ್ತು ಸಿಕ್ಕಿಲ್ಲ. ಕೊಡಗು ಜಿಲ್ಲೆಯ ಪತ್ರಕರ್ತರು ಹಲವು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದಾರೆ. ವಾರ್ತಾ ಇಲಾಖೆ ಕೊಡಮಾಡುವ ಮಾನ್ಯತಾ ಪತ್ರದಿಂದಲೂ ಜಿಲ್ಲೆಯ ಹಲವು ಪತ್ರಕರ್ತರು ವಂಚಿತರಾಗಿದ್ದಾರೆ. ಇದರಿಂದಾಗಿ ಬಸ್ ಪಾಸ್ ಇತ್ಯಾದಿ ಸವಲತ್ತುಗಳಿಂದ ನಾವು ವಂಚಿತ ರಾಗುತ್ತಿದ್ದೇವೆ. ಹಲವು ವರ್ಷದಿಂದ ತುಳಿತಕ್ಕೊಳಗಾದ ನೋವಿನಿಂದ ಇಂದು ‘ಕೊಡಗು ಪತ್ರಕರ್ತರ ಸಂಘ’ ಅಸ್ತಿತ್ವಕ್ಕೆ ಬಂದಿದೆ. ನಾವೆಲ್ಲಾ ಒಗ್ಗೂಡಿ ಹೋರಾಟ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಕೆಡಬ್ಲು÷್ಯಜೆ ಕೊಡಗು ಶಾಖೆ ಅಧ್ಯಕ್ಷ ರಾಜ್ ಕುಶಾಲಪ್ಪ ಅವರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಧಮನಕಾರಿ ನೀತಿ, ಅಧಿಕಾರ ಶಾಹಿ, ಚುನಾವಣೆ ಅಕ್ರಮದ ಬಗ್ಗೆ ಬೇಸತ್ತು ಪೊನ್ನಂಪೇಟೆ ನೂತನ ತಾಲೂಕಿನಲ್ಲಿ ಸಮಾನ ಮನಸ್ಕರು ಸೇರಿ ನೂತನ ಸಂಘ ರಚನೆ ಮಾಡಲು ನಿರ್ಧರಿಸಿದೆವು. ಪತ್ರಿಕೋದ್ಯಮದಲ್ಲಿ ವಿತರಕರ ಪಾತ್ರ ಮಹತ್ವದ್ದು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಪ್ರಾಮಾಣಿಕವಾಗಿ ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರನ್ನೂ ಸಂಘದ ಸದಸ್ಯತ್ವ ನೀಡಿ ಸೇರಿಸಿಕೊಳ್ಳಲಾಗಿದೆ. ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಿ ಪತ್ರಕರ್ತರು ಹಾಗೂ ವಿತರಕರು ಸಂಕಷ್ಟದಲ್ಲಿದ್ದಾಗ ಸಣ್ಣ ಪ್ರಮಾಣದ ನೆರವು ನೀಡುವ ಉದ್ಧೇಶವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಧ್ಯಕ್ಷ ಟಿ.ವಿ. ವಿಜಯಕುಮಾರ್, ಉಪಾಧ್ಯಕ್ಷರಾದ ವೆಂಕಟೇಶ್, ಡಾ. ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುಮಾ ಟಿ. ಹಾಗೂ ಜಂಟಿ ಕಾರ್ಯದರ್ಶಿ ಪ್ರಕಾಶ್, ಕೊಡಗು ಶಾಖೆಯ ಖಜಾಂಚಿ ಅರುಣ್, ಉಪಾಧ್ಯಕ್ಷ ಐನಂಡ ಬೋಪಣ್ಣ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ, ಕೊಡಗು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಸ್.ಎ. ಮುರುಳೀಧರ್ ಪ್ರಾರ್ಥನೆ, ಟಿ.ಎಲ್. ಶ್ರೀನಿವಾಸ್ ಸ್ವಾಗತ ಹಾಗೂ ಕೋಳೇರ ಸನ್ನು ಕಾವೇರಪ್ಪ ನಿರೂಪಿಸಿದರು.