ಮಡಿಕೇರಿ, ಮೇ ೧೬: ರಾಜ್ಯಮಟ್ಟದ ಮಿನಿ ಒಲಂಪಿಕ್ಸ್ಗೆ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಪೊನ್ನಂಪೇಟೆಯ ಹಾಕಿ ಕೂರ್ಗ್ ನಡೆಸಿದ ಹಾಕಿ ಶಿಬಿರದಲ್ಲಿ ಭಾಗವಹಿಸಿದ್ದ ಶಾಲೆಯ ವಿದ್ಯಾರ್ಥಿಗಳಾದ ಯಶ್ವಿನ್ ಬೋಪಯ್ಯ, ಸಾನ್ ಮಂದಣ್ಣ, ಆಯುಷ್ ಶೆಟ್ಟಿ, ನಮನ್ ಬೆಳ್ಳಿಯಪ್ಪ, ಯಾನ ಪೊನ್ನಮ್ಮ, ತ್ವಿಶಾ ದೇಚಮ್ಮ, ಪರ್ಲಿನ್ ಪೊನ್ನಮ್ಮ ತಾ. ೧೬ ರಿಂದ ೨೧ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ೨ನೇ ರಾಜ್ಯ ಮಿನಿ ಒಲಂಪಿಕ್ಸ್ಗೆ ಹಾಕಿ ಕೂರ್ಗ್ನ ಹಾಕಿ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಈ ವಿದ್ಯಾರ್ಥಿಗಳು ದೈಹಿಕ ಶಿಕ್ಷಕರುಗಳಾದ ದೀನಾ ಹೆಚ್.ಡಿ. ಹಾಗೂ ವಿದ್ಯಾ ರವರಿಂದ ತರಬೇತಿಯನ್ನು ಪಡೆದಿದ್ದಾರೆ.