ಸುಂಟಿಕೊಪ್ಪ, ಮೇ ೧೫: ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಶೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ತಾ. ೭ ರಂದು ಹೊರೆ ಕಾಣಿಕೆಯೊಂದಿಗೆ ಧಾರ್ಮಿಕ ಕಾರ್ಯ ಆರಂಭಗೊAಡಿತ್ತು. ಶುಕ್ರವಾರದಂದು ಪೂರ್ವಾಹ್ನ ದೇವಾಲಯದ ತಂತ್ರಿ ಶಂಕರ ನಂಬೂದರಿ ಮತ್ತು ಪ್ರಧಾನ ಆರ್ಚಕರ ತಂಡ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಷ್ಠಬಂಧ ಲೇಪನಾದಿ ಕ್ರಮಗಳೊಂದಿಗೆ ಪ್ರತಿಷ್ಠಾ ಪೂಜೆ ಮಹಾಪೂಜೆ ವೈದಿಕಾ ಮಂತ್ರಾಕ್ಷತೆ ಮತ್ತು ಪ್ರಸಾದ ವಿತರಣೆ ನಡೆಯಿತು.

ತಾ. ೧೦ ರ ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನಿಧ್ಯ ಮತ್ತು ಆಶೀರ್ವಚನವನ್ನು ಶ್ರೀ ಕ್ಷೇತ್ರ ಹೊರನಾಡು ಆದಿಶಕ್ತಾö್ಯತ್ಮಕ ಶ್ರೀ ಅನ್ನಪೂಣೇಶ್ವರಿ ಅಮ್ಮನವರ ದೇವಸ್ಥಾನದ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ನೀಡಿದರು.

೨೦೧೭ ರಿಂದ ವೇಗಪಡೆದು ಕೊಂಡ ಜೀರ್ಣೋದ್ಧಾರ ಕಾರ್ಯ ಕ್ರಮಗಳು ಮುಂದುವರೆದು ಶ್ರೀ ಗಣಪತಿ, ನಾಗ ಮತ್ತು ಗುಳಿಗ, ವಿಷ್ಣುಮೂರ್ತಿ ಹಾಗೂ ಇತರ ಪರಿವಾರ ದೇವಸ್ಥಾನಗಳು ಲೋಕಾ ರ್ಪಣೆಗೊಂಡವು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಕಾರ್ಯದರ್ಶಿ ಶಶಿ ಕಾಂತ್ ರೈ, ಬ್ರಹ್ಮಕಲಶ ಜೀರ್ಣೋ ದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಕೆ.ಪಿ. ಜಗನ್ನಾಥ್, ಪಟ್ಟೆಮನೆ ಉದಯ ಕುಮಾರ್, ಸ್ವಾಗತ ಸಮಿತಿಯ ದಾಸಂಡ ರಮೇಶ್, ಎ. ಶ್ರೀಧರ್ ಕುಮಾರ್, ಸುಕುಮಾರ್, ವೇದಿಕ ಸಮಿತಿಯ ಮಂಜುನಾಥ್ ಉಡುಪ, ಶಿವಮಣಿ, ಅಲಂಕಾರ ಸಮಿತಿಯ ರಮೇಶ್ ಪಿಳ್ಳೆöÊ, ಬಿ.ಎಂ. ಸುರೇಶ್, ಪ್ರಚಾರ ಸಮಿತಿಯ ರಾಜು ರೈ, ಶಶಿಕುಮಾರ್ ರೈ, ಎಂಎಸ್. ಸುನಿಲ್, ಆಹಾರ ಸಮಿತಿಯ ಪಿ.ಕೆ. ಜಗದೀಶ್, ಪಟ್ಟೆಮನೆ ಲೋಕೇಶ್, ವೇದಿಕೆ ಅಲಂಕಾರ ಸಮಿತಿ ಶಿವಮಣಿ, ಜಯಂತ್, ಹೊರೆ ಕಾಣಿಕೆ ಸಮಿತಿಯ ಸುರೇಶ್ ಗೋಪಿ, ಧನು ಕಾವೇರಪ್ಪ, ಉಗ್ರಾಣ ಸಮಿತಿ ಪಟ್ಟೆಮನೆ ಉದಯ ಕುಮಾರ್, ವಿ.ಎ. ಸಂತೋಷ್, ಬಾಲ, ವಿನೋದ್, ಜಿ.ಜಿ. ರಮೇಶ್ ಹಾಗೂ ಸ್ತಿçà ಶಕ್ತಿ, ಸ್ವಸಹಾಯ ಸಂಘ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಇದ್ದರು.