ಮಡಿಕೇರಿ, ಮೇ ೧೬: ಪೊನ್ನಂಪೇಟೆಯ ಶಾಲಾ ಆವರಣದಲ್ಲಿ ಶಸ್ತಾçಸ್ತç ತರಬೇತಿ ನೀಡಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಾತ್ಯತೀತ ಜನತಾದಳ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್; ಪೊನ್ನಂಪೇಟೆಯ ಸಾಯಿಶಂಕರ ಶಾಲೆಯಲ್ಲಿ ಭಜರಂಗದಳ ಸಂಘಟನೆಯವರು ಬಂದೂಕು ತರಬೇತಿ ನೀಡಿದ್ದಾರೆ. ಸಾಮಾನ್ಯವಾಗಿ ಪೊಲೀಸ್, ಮಿಲಿಟರಿಯಿಂದ ಬಂದೂಕು ತರಬೇತಿ ನೀಡಲಾಗುತ್ತಿದೆ. ಆದರೆ, ಸಂಘಟನೆಯೊAದು ತರಬೇತಿ ನೀಡಿರುವದು ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು. ಶಾಂತಿಗೆ ಹೆಸರಾದ ಜಿಲ್ಲೆಯಲ್ಲಿ ಸೌಹಾರ್ದತೆಗೆ ಭಂಗ ತರಬಾರದು. ಎಲ್ಲರೂ ಒಂದಾಗಿ ಹೋಗಬೇಕು, ಶಾಂತಿ ಪ್ರಿಯರಿರುವ ಜಿಲ್ಲೆಯಲ್ಲಿ ಇಂತಹ ಬೆಳವಣಿಗೆ ಸಲ್ಲದು.

೨೫ ಸಾವಿರ ಸದಸ್ಯತ್ವ

ಜಿಲ್ಲೆಯಲ್ಲಿ ಸದಸ್ಯತ್ವ ಆಂದೋಲನ ನಡೆಯುತ್ತಿದ್ದು, ಜನತಾ ಜಲಧಾರೆ ಅಂಗವಾಗಿ ಸ್ಥಗಿತಗೊಂಡಿತ್ತು. ಇದೀಗ ತಾ. ೧೫ ರಿಂದ ಮತ್ತೆ ಆರಂಭಗೊAಡಿದ್ದು, ಪ್ರತಿ ಗ್ರಾಮ ಮಟ್ಟದಲ್ಲಿ ಆಂದೋಲನ ನಡೆಸಲಾಗುವದು. ಈಗಾಗಲೇ ೫ಸಾವಿರದ ಗಡಿ ದಾಟಿದ್ದು, ೨೫ಸಾವಿರ ಸದಸ್ಯರನ್ನು ನೇಮಕಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಅಭ್ಯರ್ಥಿ ಗೆಲುವು ಮುಖ್ಯ

ಮುಂದಿನ ವಿಧಾನಸಬಾ ಚುನಾವಣೆಗೆ ಯಾರಿಗೆ ಟಿಕೆಟ್ ಎಂಬದು ಮುಖ್ಯವಲ್ಲ; ವರಿಷ್ಠರು ಆಯ್ಕೆ ಮಾಡುವ ಅಭ್ಯರ್ಥಿಯನ್ನು ಗೆಲ್ಲಿಸುವದು ಪಕ್ಷದ ಕರ್ತವ್ಯ. ೩೦-೩೫ ವರ್ಷಗಳಿಂದ ಮಡಿಕೇರಿ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ ಇರಲಿಲ್ಲ, ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವದು ಪಕ್ಷದ ಗುರಿಯಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನಪರ ಕಾರ್ಯಕ್ರಮಗಳಿಂದಾಗಿ ಮುಂದಿನ ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿಯಾಗಿಸುವದು ಎಲ್ಲರ ಗುರಿಯಾಗಿದೆ ಎಂದು ಹೇಳಿದರು.

ಯಾರೂ ಸನ್ಯಾಸಿಯಲ್ಲ..!

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ಪ್ರತಿಯೋರ್ವ ಕಾರ್ಯಕರ್ತ ಕೂಡ ಏನಾದರೊಂದು ಹುದ್ದೆಯ ಆಕಾಂಕ್ಷಿಗಳಾಗಿರುತ್ತಾರೆ. ತಾನು ಟಿಕೆಟ್ ಆಕಾಂಕ್ಷಿಯಲ್ಲದಿದ್ದರೂ ಸನ್ಯಾಸಿ ಅಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ನಾಪಂಡ ಮುತ್ತಪ್ಪ ಅವರು ತನ್ನೊಂದಿಗೆ ಚೆನ್ನಾಗಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಯಾರೋ ಕೆಲವರು ನಮ್ಮ ವಿರುದ್ಧ ಕಿತಾಪತಿ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ಪಕ್ಷ ಬೆಳೆಯುತ್ತಿದೆ, ನಮ್ಮಲ್ಲಿ ಚುನಾವಣೆ ಬಂದಾಗ ಅಂಗಡಿ ತೆರೆಯುವವರು ಯಾರೂ ಇಲ್ಲ, ಆಯ್ಕೆ ವಿಚಾರದಲ್ಲಿ ಎಲ್ಲರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರುವದಾಗಿ ಹೇಳಿದರು.

ಜಿಲ್ಲೆಯಲ್ಲಿ ಸೂರು ಕಳೆದುಕೊಂಡವರಿಗೆ, ನಿವೇಶನ ರಹಿತರಿಗೆ ಸೂರು ಒದಗಿಸಿಕೊಡಬೇಕೆಂದು ಆಗ್ರಹಿಸಿದ ಅವರು, ತಾ. ೧೩ ರಂದು ಸಂಪನ್ನಗೊAಡ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿದೆ. ಜಿಲ್ಲೆಯಿಂದ ಮೂರು ಸಾವಿರ ಮಂದಿ ಪಾಲ್ಗೊಂಡಿದ್ದಾಗಿ ಇದೇ ಸಂದರ್ಭ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಲೀಲಾ ಶೇಷಮ್ಮ, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಮಡಿಕೇರಿ ಮಹಿಳಾ ಘಟಕದ ಅಧ್ಯಕ್ಷೆ ಸುನಂದ, ನಗರ ಉಪಾಧ್ಯಕ್ಷ ಕುಮಾರ್, ಪರಿಶಿಷ್ಟ ಘÀಟಕದ ಅಧ್ಯಕ್ಷ ರವಿ ಇದ್ದರು.