ವೀರಾಜಪೇಟೆ, ಮೇ ೧೬: ವೀರಾಜಪೇಟೆಯಲ್ಲಿ ತಾ. ೧೯ ರಂದು ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಸಂಘಟನೆ ವತಿಯಿಂದ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.
ನಗರದ ಬೀದಿಗಳೆಲ್ಲಾ ಶೋಭಾಯಾತ್ರೆಯ ಅಂಗವಾಗಿ ಕೇಸರಿ ರಂಗಿನಲ್ಲಿ ಮಿಂದೇಳುತ್ತಿವೆ. ಶೋಭಾಯಾತ್ರೆಯ ಪೂರ್ವಭಾವಿಯಾಗಿ ಮಂಗಳವಾರ ಆಂಜನೇಯ ದೇವಸ್ಥಾನದಿಂದ ಸುಮಾರು ಮುನ್ನೂರು ಬೈಕ್‌ಗಳಲ್ಲಿ ಬೈಕ್ ಜಾಥಾ ನಡೆಯಲಿದ್ದು, ಗುರುವಾರದಂದು ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಳಿಕ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ವೀರಾಜಪೇಟೆ ವಿಶ್ವ ಹಿಂದೂ ಪರಿಷದ್ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ. ಕುಮಾರ್ ಮಾಹಿತಿ ನೀಡಿದರು. ಸಮಾಜೋತ್ಸವದ ಅಂಗವಾಗಿ ನಗರದಲ್ಲಿ ಕೇಸರಿ ಬಾವುಟ, ಕಂಗೊಳಿಸುತ್ತಿದೆ.