ಮಡಿಕೇರಿ, ಮೇ ೧೬: ಶುಶ್ರೂಷಕಿಯರ ದಿನವನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಆಚರಿಸ ಲಾಯಿತು.

ಈ ಸಂದರ್ಭ ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟç ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪಡೆದ ರಂಜಿತ್ ಕುದುಪಜೆ ಅವರನ್ನು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಯೂನುಸ್ ನಜ್ಮಿ ಸನ್ಮಾನಿಸಿದರು.

ವಿಮಾ ಆಸ್ಪತ್ರೆಯ ವೈದ್ಯರುಗಳು ಶುಶ್ರೂಷಾಧೀಕ್ಷಕರು, ಶುಶ್ರೂಷ ಅಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು. ಮೂಲತಃ ತಣ್ಣಿಮಾನಿ ಗ್ರಾಮದವರಾದ ರಂಜಿತ್ ಕುದುಪಜೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ.