ಸೋಮವಾರಪೇಟೆ, ಮೇ ೧೬: ತಾಲೂಕಿನ ಬ್ಯಾಡಗೊಟ್ಟ ಹಾಗೂ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿ ರುವ ರೂ. ೮೦ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಕ್ಯಾತೆ ಗ್ರಾಮ ರಸ್ತೆ, ಬೆಂಬಳೂರು, ಬ್ಯಾಡಗೊಟ್ಟ ಮುಖ್ಯರಸ್ತೆಯಿಂದ ಗ್ರಾಮ ಸಂಪರ್ಕಿಸುವ ಒಳರಸ್ತೆ, ಊರುಗುತ್ತಿ, ಕೊಡ್ಲಿಪೇಟೆ ಮುಖ್ಯರಸ್ತೆ ಯಿಂದ ಲೋಕೇಶ್ ಮನೆ ರಸ್ತೆ, ಬೆಂಬಳೂರು ಕಾಲೋನಿ ರಸ್ತೆ, ತಗಳೂರು ಪ.ಜಾ. ಕಾಲೋನಿ ರಸ್ತೆಗಳ ಅಭಿವೃದ್ಧಿಗೆ ೩೫ ಲಕ್ಷ ಮಂಜೂರಾಗಿದ್ದು, ಶಾಸಕರು ಭೂಮಿಪೂಜೆ ನೆರವೇರಿಸಿದರು.

ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ, ಚಿಕ್ಕಭಂಡಾರ, ಅಗಳಿ, ಕೊಡ್ಲಿಪೇಟೆ-ಮಲ್ಲಿಪಟ್ಟಣ ಮುಖ್ಯರಸ್ತೆಯಿಂದ ಕೂಡ್ಲೂರು ರಸ್ತೆ, ದೊಡ್ಡಭಂಡಾರ ರಸ್ತೆ, ನಿಲುವಾಗಿಲು ಗ್ರಾಮದ ರಸ್ತೆಗಳಿಗೆ ೪೫ ಲಕ್ಷ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ. ವೀರೇಂದ್ರ, ಇಂಜಿನಿಯರ್ ಸಲೀಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಬೆಸೂರು ಗ್ರಾ.ಪಂ. ಅಧ್ಯಕ್ಷೆ ಕೀರ್ತಿ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.