ನಾಪೋಕ್ಲು, ಮೇ ೧೫: ಕಕ್ಕಬ್ಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಕಕ್ಕಬ್ಬೆ ಪಟ್ಟಣದಲ್ಲಿರುವ ಕಕ್ಕಬ್ಬೆ ಹೊಳೆಯಲ್ಲಿ ೨ನೇ ವರ್ಷದ ಈಜು ಸ್ಪರ್ಧೆ ರೋಮಾಂಚಕಾರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಕಲಿಯಂಡ ಪ್ರಕಾಶ್ ಕಾರ್ಯಪ್ಪ ಏಳು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ತಾಮರ ರೆಸಾರ್ಟ್ನ ಸಲಹೆಗಾರ ಪಾಲೆಕಂಡ ಸಾಯಿ ಕರುಂಬಯ್ಯ, ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ವೈದ್ಯರಾದ ಸಣ್ಣುವಂಡ ಕಾವೇರಪ್ಪ, ಹೈಲ್ಯಾಂರ‍್ಸ್ ಕ್ಲಬ್‌ನ ಕಾರ್ಯದರ್ಶಿ ನಾಟೋಳಂಡ ಶಂಭು ಕರುಂಬಯ್ಯ, ರೋಶಿನಿ ವಿದ್ಯಾಸಂಸ್ಥೆಯ ಡಾ. ನಡಿಕೇರಿಯಂಡ ತೇಜ್ ಪೂವಯ್ಯ, ಖ್ಯಾತ ರ‍್ಯಾಲಿ ಪಟು ಮಾಳೇಟಿರ ಜಗತ್ ನಂಜಪ್ಪ, ವಕೀಲರಾದ ಕೋಡಿಮಣಿಯಂಡ ಕುಟ್ಟಪ್ಪ, ಕ್ಲಬ್‌ನ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಅಪ್ಪಾರಂಡ ಸಾಗರ್ ಗಣಪತಿ, ಮತ್ತಿತರರು ಇದ್ದರು.

ವಿಜೇತರು: ೧ ಕಿ.ಮೀ ಸ್ಪರ್ಧೆಯ ೯ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಅಖಿಲ್ ಪ್ರಥಮ, ಆರ್ಯನ್ ದ್ವಿತೀಯ, ಹುಡುಗಿಯರ ವಿಭಾಗದಲ್ಲಿ ತನಿಷ್ಕಾ ಪ್ರಥಮ ಸ್ಥಾನಗಳಿಸಿದರು. ೧೫ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಶ್ರೀರಂಗ ಪ್ರಥಮ, ಮೌರಿಸ್ ದ್ವಿತೀಯ, ಹುಡುಗಿಯರ ವಿಭಾಗದಲ್ಲಿ ಸೋನಿಕಾ ಪ್ರಥಮ, ಧ್ರುತಿ ದ್ವಿತೀಯ ಸ್ಥಾನ ಪಡೆದರು. ೧೯ ವರ್ಷ ಮೇಲ್ಪಟ್ಟವರ ಹುಡುಗರ ವಿಭಾಗದಲ್ಲಿ ಚರಣ್ ಪ್ರಥಮ, ಅಮೋಗ್ ದ್ವಿತೀಯ ಸ್ಥಾನಗಳಿಸಿದರು. ಅದರಂತೆ ೪೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮೋಹನ್ ರಾವ್ ಪ್ರಥಮ ಸ್ಥಾನಗಳಿಸಿದರೆ, ಎಂ.ಹೆಚ್.ಸಾಮ್‌ಕರ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ೨೦೦ ಮೀ ಸ್ಪರ್ಧೆಯ ೧೦ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಅಖಿಲ್ ಪ್ರಥಮ, ಹಾಗೂ ಆರ್ಯನ್ ದ್ವಿತೀಯ ಸ್ಥಾನ ಪಡೆದರು. ಹಾಗೆಯೇ ಹುಡುಗಿಯರ ವಿಭಾಗದಲ್ಲಿ ತನಿಷ್ಕಾ ಪ್ರಥಮ ಸ್ಥಾನಗಳಿಸಿದರು. ೧೩ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಸ್ಮರ್ ಶಂಕರ್ ಪ್ರಥಮ, ಮೌರಿಸ್ ದ್ವಿತೀಯ ಸ್ಥಾನಗಳಿಸಿದರೆ, ಹುಡುಗಿಯರ ವಿಭಾಗದಲ್ಲಿ ಸೋನಿಕಾ ಪ್ರಥಮ ಹಾಗೂ ಶಿಮೋನ್ ಕುಪ್ಪಂಡ ದ್ವಿತೀಯ ಸ್ಥಾನ ಪಡೆದರು. ೧೫ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಶ್ರೀರಂಗ ಪ್ರಥಮ ಸ್ಥಾನ ಹಾಗೂ ಓಂ ಕೃಷ್ಣ ಮೇಲಂತ ದ್ವಿತೀಯ ಸ್ಥಾನ ಪಡೆದರು. ೧೯ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಆರ್ಯನ್ ಚಂಗಪ್ಪ ಪ್ರಥಮ ಸ್ಥಾನಗಳಿಸಿದರು. ೧೯ ವರ್ಷ ಮೇಲ್ಪಟ್ಟ ಹುಡುಗರ ವಿಭಾಗದಲ್ಲಿ ತೇಜಸ್ ಪ್ರಥಮ ಸ್ಥಾನ ಹಾಗೂ ಅಮೋಗ್ ದ್ವಿತೀಯ ಸ್ಥಾನಗಳಿಸಿದರು. ೪೫ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಎಂ.ಹೆಚ್. ಸಾಮ್‌ಕರ್ ಪ್ರಥಮ ಸ್ಥಾನ ಪಡೆದರು.

೧೦೦ ಮೀ ಸ್ಪರ್ಧೆಯ ೧೦ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಆರ್ಯನ್ ಕೆ.ಜಿ ಪ್ರಥಮ ಹಾಗೂ ಜನಿತ್ ಬೋಪಣ್ಣ ದ್ವಿತೀಯ ಸ್ಥಾನ ಗಳಿಸಿದರೆ, ಹುಡುಗಿಯರ ವಿಭಾಗದಲ್ಲಿ ಶಿಮೋನ್ ಕುಪ್ಪಂಡ ಪ್ರಥಮ ಹಾಗೂ ದೀತ್ಯ ಕೃಷ್ಣ ದ್ವಿತೀಯ ಸ್ಥಾನ ಪಡೆದರು. ೧೩ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ತನವ್ ಪೊನ್ನಣ್ಣ ಪ್ರಥಮ ಹಾಗೂ ಓಂ ಕೃಷ್ಣ ಮೇಲಂತ ದ್ವಿತೀಯ ಸ್ಥಾನಗಳಿಸಿದರು. ೧೫ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ತನಿಶ್ ಮುತ್ತಪ್ಪ ಪ್ರಥಮ ಹಾಗೂ ಕಲಿಯಂಡ ಚಂಗಪ್ಪ ದ್ವಿತೀಯ ಸ್ಥಾನಗಳಿಸಿದರು. ೧೯ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಆರ್ಯನ್ ಚಂಗಪ್ಪ ಪ್ರಥಮ ಹಾಗೂ ಕಲ್ಯಾಟಂಡ ಸುಬ್ಬಯ್ಯ ದ್ವಿತೀಯ ಸ್ಥಾನಗಳಿಸಿದರು. ೧೯ ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಅಮೋಗ್ ಪ್ರಥಮ ಹಾಗೂ ಚರಣ್ ಬಿ.ಎ ದ್ವಿತೀಯ ಸ್ಥಾನಗಳಿಸಿದರು. ಹಾಗೆಯೇ ೪೫ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮೋಹನ್‌ರಾವ್ ಪ್ರಥಮ ಸ್ಥಾನ ಗಳಿಸಿದರು. ೩೦ ಮೀ. ಸ್ಪರ್ಧೆಯ ೭ ವರ್ಷದೊಳಗಿನ ವಿಭಾಗದಲ್ಲಿ ಕಲಿಯಂಡ ಧಾನ್ವಿ ಪ್ರಥಮ ಹಾಗೂ ಯತರ್ಥ್ ದ್ವಿತೀಯ ಸ್ಥಾನಗಳಿಸಿದರು. ೧೦ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಅಖಿಲ್ ಪ್ರಥಮ ಹಾಗೂ ಜನಿತ್ ಬೋಪಣ್ಣ ದ್ವಿತೀಯ ಸ್ಥಾನ ಪಡೆದರು. ೧೩ ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ತನವ್ ಪೊನ್ನಣ್ಣ ಪ್ರಥಮ ಹಾಗೂ ಓಂ ಕೃಷಿ ಮೇಲಂತ ದ್ವಿತೀಯ ಸ್ಥಾನಗಳಿಸಿದರೆ, ಹುಡುಗಿಯರ ವಿಭಾಗದಲ್ಲಿ ದೀತ್ಯ ಕೃಷ್ಣ ಪ್ರಥಮ ಹಾಗೂ ಶಿಮೋನ್ ಕುಪ್ಪಂಡ ದ್ವಿತೀಯ ಸ್ಥಾನಗಳಿಸಿದರು. ೧೩ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ತನಿಶ್ ಮುತ್ತಪ್ಪ ಪ್ರಥಮ ಸ್ಥಾನ ಹಾಗೂ ಕಲಿಯಂಡ ಚಂಗಪ್ಪ ದ್ವಿತೀಯ ಸ್ಥಾನಗಳಿಸಿದರು. ಕೂರ್ಗ್ ಬಿಗಿರ‍್ಸ್ನ ೧೦ ವರ್ಷ ಮೇಲ್ಪಟ್ಟವರ ಹುಡುಗರ ವಿಭಾಗದಲ್ಲಿ ತನವ್ ಪೊನ್ನಣ್ಣ ಪ್ರಥಮ ಹಾಗೂ ಅನಮೋಲ್ ದ್ವಿತೀಯ ಸ್ಥಾಗಳಿಸಿದರು. ಅಂತೆಯೇ ಹುಡುಗಿಯರ ವಿಭಾಗದಲ್ಲಿ ಸಿಯಾ ಪ್ರಥಮ ಹಾಗೂ ಸಾನ್ವಿ ದ್ವಿತೀಯ ಸ್ಥಾನ ಗಳಿಸಿದರು.