ಮಡಿಕೇರಿ, ಮೇ ೧೫: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯ ಕೊಡವ ಸಮಾಜದ ೨೦೨೨-೨೫ನೇ ಸಾಲಿನ ಮೂರು ವರ್ಷಗಳ ಅಧಿಕಾರಾವಧಿಗೆ ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಿಗದಿಯಾಗಿದೆ.

ಹಾಲಿ ಅಧ್ಯಕ್ಷರಾಗಿರುವ ಕೊಂಗAಡ ಎಸ್. ದೇವಯ್ಯ ಹಾಗೂ ತಂಡದ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದು, ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ. ಚುನಾವಣಾಧಿಕಾರಿಯಾಗಿ ಚೆಕ್ಕೇರ ಎಂ. ಪ್ರಮೋದ್ ನಿಯುಕ್ತಿಗೊಂಡಿದ್ದಾರೆ. ಮೇ ೨೫ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ತಾ. ೨೬ ರಂದು ಪರಿಶೀಲನೆ, ತಾ. ೨೭ ರಂದು ಹಿಂಪಡೆಯಲು ಅವಕಾಶವಿದೆ. ಅಗತ್ಯವಾದರೆ ಜೂನ್ ೫ ರಂದು ಬೆ. ೮ ರಿಂದ ಅಪರಾಹ್ನ ೧.೩೦ರ ತನಕ ಮತದಾನ ಹಾಗೂ ನಂತರ ಮತ ಎಣಿಕೆಯೊಂದಿಗೆ ಫಲಿತಾಂಶ ಪ್ರಕಟವಾಗಲಿದೆ.

ಮಹಾಸಭೆ

ಸಮಾಜದ ೨೦೨೧- ೨೨ನೇ ಸಾಲಿನ ಮಹಾಸಭೆ ಜೂ. ೫ ರಂದು ಬೆ. ೧೦.೩೦ಕ್ಕೆ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಿಗದಿಯಾಗಿದೆ.