ಸಿದ್ದಾಪುರ, ಮೇ ೧೫: ಹಾಕತ್ತೂರು ಸರಕಾರಿ ಶಾಲಾ ಮೈದಾನದಲ್ಲಿ ನಡೆದ ಎರಡನೇ ವರ್ಷದ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಕೈಚೂರ ಸ್ಟೆçöÊಕರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸಮಾಜ ಸೇವಕ ಮಂತರ್ ಗೌಡ ಉದ್ಘಾಟಿಸಿದ ಪಂದ್ಯಾಟದಲ್ಲಿ ೧೦ ತಂಡಗಳು ಭಾಗವಹಿಸಿತ್ತು. ಫೈನಲ್ ಪಂದ್ಯಾಟವು ಇರ್ಷಾದ್ ಮಾಲೀಕತ್ವದ ಕೈಚೂರ ಸ್ಟೆçöÊಕರ್ಸ್ ಹಾಗೂ ಅಬೂಬಕ್ಕರ್ ಮಾಲೀಕತ್ವದ ರಫ ಫೈಟರ್ಸ್ ತಂಡಗಳ ನಡುವೆ ನಡೆಯಿತು. ರೋಚಕ ಗೆಲುವನ್ನು ಪಡೆದ ಕೈಚೂರ ಸ್ಟೆçöÊಕರ್ಸ್ ತಂಡ ೧ ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದರೆ ರನ್ನರ್ ತಂಡವಾದ ರಫ ಫೈಟರ್ಸ್ ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು. ಮೂರನೆ ಸ್ಥಾನವನ್ನು ಪೌಂಡ್ ಹಿಟ್ಟರ್ಸ್ ತಂಡ ಪಡೆದುಕೊಂಡರೆ ನಾಲ್ಕನೇ ಸ್ಥಾನಕ್ಕೆ ಅರೇಬಿಯನ್ ಬ್ರದರ್ಸ್ ತಂಡ ತೃಪ್ತಿಪಟ್ಟರು.

ಪಂದ್ಯಾಟದ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಪೌಂಡ್ ಹಿಟ್ಟರ್ಸ್ ತಂಡದ ಸಜನ್ ಪರ್ಲಕೋಟಿ, ಉತ್ತಮ ಬೌಲರ್ ಕೈಚೂರ ತಂಡ ಸಯ್ಯದ್ ಹಕೀಮ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಮೀರ್, ಉತ್ತಮ ಆಲ್ ರೌಂಡರ್ ಲಕ್ಷಿತ್ ಪರ್ಲಕೋಟಿ ಪಡೆದುಕೊಂಡರು. ಪಂದ್ಯಾಟದಲ್ಲಿ ಶಿಸ್ತಿನ ತಂಡದ ಪ್ರಶಸ್ತಿಯನ್ನು ಸಿಎಸ್‌ಕೆ ತಂಡ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ದಾನಿಗಳಾದ ಪ್ರಸಾದ್ ಪೂಜಾರಿ, ಖಾಸಿಂ, ಮಗೆ ಪೂಜಾರಿ, ಇಬ್ರಾಹಿಂ, ಮೊಹಮ್ಮದ್ ಅಲಿ ಇದ್ದರು.