ಸೋಮವಾರಪೇಟೆ,ಮೇ.೧೪: ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ ತಾ.೧೮ರಂದು ಪಟ್ಟಣದ ಜಾನಕಿ ಕನ್ವೆನ್‌ಷನ್ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೯.೩೦ರಿಂದ ಸಂಜೆ ೪ ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ನರವಿಜ್ಞಾನ ಮತ್ತು ಪಾರ್ಶ್ವವಾಯು ತಜ್ಞರಾದ ಡಾ. ಸುಶೃತ ಸೇರಿದಂತೆ ಹೃದ್ರೋಗ ತಜ್ಞರು, ಮನೋ ವೈದ್ಯರು, ಮೂತ್ರಪಿಂಡ ತಜ್ಞರು, ಮೂಳೆ ತಜ್ಞರು, ಸ್ತಿçà ರೋಗ ಸೇರಿದಂತೆ ಇತರ ತಜ್ಞರು ಭಾಗಿಯಾಗಿ ತಪಾಸಣೆ ನಡೆಸಲಿದ್ದಾರೆ ಎಂದು ಪ್ರಕಾಶ್ ಅವರು ಮಾಹಿತಿ ನೀಡಿದ್ದಾರೆ.