ಬ್ಯಾಂಕಾಕ್, ಮೇ ೧೫: ಭಾರತದ ಬ್ಯಾಡ್ಮಿಂಟನ್ ತಂಡ ಪ್ರತಿಷ್ಠಿತ ಥಾಮಸ್ ಕಪ್ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಹಾಗೂ ೧೪ ಬಾರಿಯ ಚಾಂಪಿಯನ್ಸ್ ಇಂಡೊನೇಷ್ಯಾ ತಂಡವನ್ನು ೩-೦ ಅಂತರದಲ್ಲಿ ಬಗ್ಗುಬಡಿದ ಭಾರತ ಟ್ರೋಫಿ ಎತ್ತಿ ಹಿಡಿಯಿತು.

ಭಾರತಕ್ಕೆ ವಿಶ್ವಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಪದಕ ಗೆದ್ದುಕೊಟ್ಟಿರುವ ಚಾಂಪಿಯನ್ ಆಟಗಾರರಾದ ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷö್ಯಸೇನ್ ಮಿಂಚಿನ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಡಬಲ್ಸ್ ವಿಭಾಗದಲ್ಲೂ ಯುವ ಜೋಡಿ ಚಿರಾಟ್ ಶೆಟ್ಟಿ ಮತ್ತು ಸಾತ್ವಿಕ್ ಸಾಯ್‌ರಾಜ್ ಜಯ ತಂದುಕೊಟ್ಟರು.

ನಾಕ್‌ಔಟ್ ಹಂತದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಭಾರತ ತಂಡ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಹುಬ್ಬೇರುವಂತೆ ಮಾಡಿತು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಕಣಕ್ಕಿಳಿದ ಕಿರಿಯರ ವಿಭಾಗದಲ್ಲಿ ಲಕ್ಷö್ಯಸೇನ್, ಆರಂಭಿಕ ಗೇಮ್ ಸೋತರೂ ೮-೨೧, ೨೧-೧೭, ೨೧-೧೬ ಅಂತರದ ಗೇಮ್‌ಗಳಿಂದ ಅನುಭವಿ ಆಟಗಾರ ಹಾಗೂ ವಿಶ್ವದ ೫ನೇ ಶ್ರೇಯಾಂಕ ಹೊಂದಿರುವ ಆಂಥೊನಿ ಸಿನಿಸುಕ ಗಿನ್ಟಿಂಗ್ ವಿರುದ್ಧ ಜಯ ದಾಖಲಿಸಿ ೧-೦ ಅಂತರದ ಮುನ್ನಡೆ ತಂದುಕೊಟ್ಟರು.

ನAತರ ನಡೆದ ಡಬಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವದ ೮ನೇ ಶ್ರೇಯಾಂಕ ಹೊಂದಿರುವ ಸಾತ್ವಿಕ್ ಸಾಯ್‌ರಾಜ್ ಮತ್ತು ಚಿರಾಗ್ ಶೆಟ್ಟಿ ಇಂಡೊನೇಷ್ಯಾದ ಚಾಂಪಿಯನ್ ಜೋಡಿಯ ಸವಾಲನ್ನು ಹತ್ತಿಕ್ಕಿದರು. ಚಿರಾಗ್-ಸಾತ್ವಿಕ್ ಜೋಡಿ, ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡುವೆಯೂ ನಿರಾಶೆ ಅನುಭವಿಸಿತ್ತು. ಆದರೆ, ಹೋರಾಟ ಬಿಡದ ಭಾರತೀಯ ಆಟಗಾರರು ೧೮-೨೧, ೨೩-೨೧, ೨೧-೧೯ ಅಂಕಗಳ ಅಂತರದ ಗೇಮ್‌ಗಳಿಂದ ಮೊಹಮ್ಮದ್ ಅನ್ಹಾಸ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಎದುರು ಮೇಲುಗೈ ಸಾಧಿಸಿತು. ಇದರೊಂದಿಗೆ ಭಾರತ ೨-೦ ಅಂತರದ ಮುನ್ನಡೆಯೊಂದಿಗೆ ಜಯಸಾಧಿಸಿತು.

ಇದಾದ ಬಳಿಕ ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲೂ ಯಶಸ್ಸು ಭಾರತದ ಪಾಲಾಯಿತು. ವಿಶ್ವದ ಮಾಜಿ ನಂ.೧ ಆಟಗಾರ ಹೈದರಾಬಾದ್ ಮೂಲದವರಾದ ಕಿಡಂಬಿ ಶ್ರೀಕಾಂತ್, ಏಷ್ಯನ್ ಚಾಂಪಿಯನ್ ಜೊನಾಥನ್ ಕ್ರಿಸ್ಟೀ ಅವರನ್ನು ಕೇವಲ ೪೮ ನಿಮಿಷಗಳ ಅಂತರದಲ್ಲಿ ೨೧-೧೫ ೨೩-೨೧ ಅಂತರದ ಗೇಮ್‌ಗಳಿಂದ ಬಗ್ಗುಬಡಿದರು. ಈ ಜಯದೊಂದಿಗೆ ಭಾರತ ತಂಡ ಬೆಸ್ಟ್ ಆಫ್ ೫ ಸ್ಪರ್ಧೆಯಲ್ಲಿ ೩-೦ ಅಂತರದಲ್ಲಿ ಗೆದ್ದು ಮೊತ್ತ ಮೊದಲ ಬಾರಿ ಚಾಂಪಿಯನ್ಸ್ ಎನಿಸಿಕೊಳ್ಳುವ ಮೂಲಕ ಇತಿಹಾಸ ಬರೆಯಿತು. ಭಾರತ ಸರಕಾರ ರೂ. ೧ ಕೋಟಿ ಬಹುಮಾನ ಘೋಷಿಸಿದೆ.