ಸೋಮವಾರಪೇಟೆ, ಮೇ ೧೫: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡAತೆ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಅವರು, ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿ ವರ್ಗ ಸದಾ ಉತ್ಸುಕವಾಗಿರಬೇಕು ಎಂದರು.
ತಾಲೂಕಿನಲ್ಲಿ ಪ್ರಗತಿಯಲ್ಲಿರುವ ವಿವಿಧ ವಸತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ತಾ. ೩೦ರ ಒಳಗೆ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕೆಂದು ಸೂಚಿಸಿದರು.
ಸ್ಥಿತಿವಂತರು, ಕಾಫಿ ತೋಟಗಳ ಮಾಲೀಕರು ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ಗಳನ್ನು ಹೊಂದಿಕೊAಡಿದ್ದರೆ ಅದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಅಧಿಕಾರಿಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದರೆ ನೋಟೀಸ್ ನೀಡಿ ದಂಡ ವಸೂಲಿ ಮಾಡಬೇಕೆಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲೂಕಿನಲ್ಲಿರುವ ಒಟ್ಟು ಜನಸಂಖ್ಯೆ, ಮನೆಗಳು, ಕುಟುಂಬಗಳ ಬಗ್ಗೆ ಮಾಹಿತಿ ಕೇಳಿದ ಸಚಿವರು, ಸಮರ್ಪಕವಾದ ಮಾಹಿತಿ ದೊರೆಯದ ಹಿನ್ನೆಲೆ ಚರ್ಚೆಯನ್ನು ಕೈಬಿಟ್ಟರು. ಜಿಲ್ಲೆಯಲ್ಲಿ ಜಾಗಕ್ಕೆ ಸಂಬAಧಿಸಿದAತೆ ಹಲವಷ್ಟು ಸಮಸ್ಯೆಗಳಿರುವ ಹಿನ್ನೆಲೆ ಸರ್ಕಾರದ ಯೋಜನೆಗಳು ಹಲವಷ್ಟು ಮಂದಿಗೆ ಲಭಿಸುತ್ತಿಲ್ಲ. ಜಂಟಿ ಖಾತೆ, ಪಟ್ಟೆದಾರ ಸಮಸ್ಯೆ ಬಗೆಹರಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು. ಜಲಜೀವನ್ ಮಿಷನ್ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಶುದ್ಧ ಕುಡಿಯುವ ನೀರು ಲಭಿಸುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಯೋಜನೆಯ ಮಾಹಿತಿಯನ್ನು ಜನರಿಗೆ ತಿಳಿಸಬೇಕು ಎಂದು ಸಚಿವರು ಸೂಚಿಸಿದರು.
ಆರೋಗ್ಯ ಇಲಾಖೆಯಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಉಸ್ತುವಾರಿಗಳು, ವೈದ್ಯರ ಕೊರತೆ, ಜನನ-ಮರಣ ಪ್ರಮಾಣ, ಶಿಶು ಮರಣ, ಲಿಂಗಾನುಪಾತದ ಬಗ್ಗೆ ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್ ಅವರಿಂದ ವಿವರಣೆ ಪಡೆದರು.
ಬೀದಿ ಬದಿ ವ್ಯಾಪಾರಸ್ಥರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವಂತೆ ತಿಳಿ ಹೇಳಬೇಕು. ಇದರೊಂದಿಗೆ ಆನ್‌ಲೈನ್ ಪೇಮೆಂಟ್‌ಗೆ ಒತ್ತು ನೀಡಿದರೆ ಹೆಚ್ಚುವರಿಯಾಗಿ ೩ ಸಾವಿರ ಹಣ ನೀಡಲಾಗುತ್ತಿದ್ದು, ಈ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ನೀಡಬೇಕು ಎಂದು ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಹೇಳಿದರು.
ನಗರೋತ್ಥಾನ ೩ನೇ ಹಂತದಲ್ಲಿ ಬಿಡುಗಡೆಯಾದ ಅನುದಾನದಲ್ಲಿ ೨೨ ಲಕ್ಷ ಉಳಿಕೆಯಾಗಿದ್ದು, ಇದರ ಬಳಕೆಯತ್ತ ಗಮನ ಹರಿಸಬೇಕೆಂದು ಸೂಚಿಸಿದರು. ಕಾರ್ಮಿಕ ಕಾರ್ಡ್ ಗಳನ್ನು ಇತರರು ಪಡೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಕಾಫಿ ತೋಟದ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರೆಂದು ಪರಿಗಣಿಸಿ ನೋಂದಾವಣೆ ಮಾಡಿಕೊಳ್ಳುವ ಬಗ್ಗೆ ಗಮನ ಹರಿಸುವಂತೆ ಅಧಿಕಾರಿ ಲೀನಾ ಅವರಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭನ್ವರ್‌ಸಿಂಗ್, ಡಿವೈಎಸ್‌ಪಿ ಶೈಲೇಂದ್ರ, ಸಚಿವರ ಆಪ್ತ ಕಾರ್ಯದರ್ಶಿಗಳು, ತಹಶೀಲ್ದಾರ್ ಗೋವಿಂದರಾಜು ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾ ಧಿಕಾರಿಗಳು ಭಾಗವಹಿಸಿದ್ದರು.