ಕುಶಾಲನಗರ, ಮೇ ೧೪: ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರ ನೆಹರು ಬಡಾವಣೆಯಲ್ಲಿ ನಡೆದಿದೆ.

ಕುಶಾಲನಗರ ನೆಹರು ಬಡಾವಣೆಯ ನಿವಾಸಿ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಎಂಬವರ ಪತ್ನಿ ಪ್ರಭಾವತಿ (೩೩) ಎಂಬವರು ಆತ್ಮಹತ್ಯೆಗೆ ಶರಣಾದವರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಘಟನೆ ನಡೆದಿದ್ದು, ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.