ಶನಿವಾರಸಂತೆ, ಮೇ ೧೪: ಸಮೀಪದ ನಂದಿಗುAದ ಗ್ರಾಮದಲ್ಲಿ ಗ್ರಾಮದೇವತೆಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರಸಂತೆ ಕಡೆ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಮಾದಗೋಡು ಗ್ರಾಮದ ವ್ಯಕ್ತಿ ಬೈಕ್‌ನಲ್ಲಿ ಬಂದು ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಶನಿವಾರಸಂತೆಯ ಎನ್.ಎಚ್. ರವಿಚಂದ್ರನ್ ಹಾಗೂ ನಂದಿಗುAದ ಗ್ರಾಮದ ಅಭಿಷೇಕ್ ಹಲ್ಲೆಗೊಳಗಾದ ಕಾರ್ಮಿಕರು. ಮಾದಗೋಡು ಗ್ರಾಮದ ಕಾರ್ಮಿಕ ಪಿ. ರವಿಚಂದ್ರನ್ ಹಾಗೂ ಅಭಿಷೇಕ್ ಸಂಜೆ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗಲೇ ಇಬ್ಬರ ನಡುವೆ ಗಲಾಟೆಯಾಗಿದೆ. ಗ್ರಾಮಸ್ಥರು ಇಬ್ಬರನ್ನು ಸಮಾಧಾನಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಪುನಃ ರಾತ್ರಿ ಶನಿವಾರಸಂತೆ ಕಡೆ ಕಾರಿನಲ್ಲಿ ಬರುತ್ತಿರುವಾಗ ಎಳನೀರುಗುಂಡಿ ಗ್ರಾಮದ ಬಸ್ ತಂಗುದಾಣದ ಬಳಿ ಕಾರು ತಡೆದು ಹಲ್ಲೆ ನಡೆಸಿದ್ದು, ಅಲ್ಲಿಯೇ ನಿಂತಿದ್ದ ಇಬ್ಬರು ವ್ಯಕ್ತಿಗಳು ಧಾವಿಸಿ ಬಂದಾಗ ಆರೋಪಿ ದಯಾ ಬೆದರಿಕೆ ಹಾಕಿ ಬೈಕ್ ಏರಿ ಹೊರಟು ಹೋಗಿದ್ದಾನೆ. ರವಿಚಂದ್ರನ್ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಅನ್ವಯ ೩೪೧, ೩೨೪, ೫೦೪, ೫೦೬ ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.