ನಾಪೋಕ್ಲು, ಮೇ ೧೨: ದುಬೈ(ಯುಎಇ)ನಲ್ಲಿರುವ ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈದ್ ಹಬ್ಬದ ಪ್ರಯುಕ್ತ ದುಬೈನ ಜಧಾಫನ ಕ್ರಿಕ್ ಝಿ ಫೋರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯಾಟದಲ್ಲಿ ಕೊಡಗಿನ ನಿಶಾಬ್ ನಾಯಕತ್ವದ ನೆಲ್ಲಿಹುದಿಕೇರಿ ತಂಡವನ್ನು ದುದ್ದಿಯಂಡ ಝಿಯಾ ನಾಯಕತ್ವದ ಚೋಕಂಡಳ್ಳಿ ತಂಡವು ಮಣಿಸಿ ಟ್ರೋಫಿಯನ್ನು ತನ್ನಾದಾಗಿಸಿ ಕೊಂಡಿತು. ಇದರಲ್ಲಿ ೧೦ ತಂಡಗಳು ಭಾಗವಹಿಸಿದ್ದವು. ಅದರಂತೆ ಅಬುಹೈಲ್‌ನಲ್ಲಿರುವ ಸ್ಕೌಟ್ ಮಿಷನ್ ಫುಟ್ಬಾಲ್ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಪರವಂಡ ಆಶೀಪ್ ನಾಯಕತ್ವದ ಎವೆಂರ‍್ಸ್ ನಾಪೆೆÇÃಕ್ಲು ಚೆರಿಯ ಪರಂಬು ತಂಡವು ಕುಂಜಿಲ ತಂಡವನ್ನು ಸೋಲಿಸಿ ಟ್ರೋಫಿಯನ್ನು ಮತ್ತು ನಗದನ್ನು ತನ್ನದಾಗಿಸಿ ಕೊಂಡಿತು. ಇದರಲ್ಲಿ ೭ ತಂಡಗಳು ಭಾಗವಹಿಸಿದ್ದವು. ಈ ಸಂದರ್ಭ ಕೊಡಗಿನ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.