ಕರಿಕೆ,ಮೇ ೧೩ : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯ ಬಸ್ ಹಾಗೂ ಖಾಸಗಿ ಜೀಪ್ ಡಿಕ್ಕಿ ಸಂಭವಿಸಿ ಜೀಪಿನಲ್ಲಿದ್ದ ಓರ್ವ ಪ್ರಯಾಣಿಕ ಗಾಯಗೊಂಡಿರುವ ಘಟನೆ ಕರಿಕೆಯಲ್ಲಿ ನಡೆದಿದೆ.
ಮಂಗಳೂರು ಘಟಕಕ್ಕೆ ಸೇರಿದ ಮೈಸೂರುನಿಂದ ಕರಿಕೆ, ಕೇರಳದ ಕಾಞಂಗಾಡ್- ಕಾಸರಗೋಡು ಮಾರ್ಗವಾಗಿ ಮಂಗಳೂರಿಗೆ ತೆರಳುವ ಬಸ್ (ಕೆ.ಎ.೧೯ ಎಫ್ ೩೪೪೨) ಮತ್ತು ಕರಿಕೆ ಚೆತ್ತುಕಾಯದ ಲಿತಿನ್ ಎಂಬವರಿಗೆ ಖಾಸಗಿ ಜೀಪ್ (ಕೆ.ಎಲ್. ೧೪ ಸಿ೫೪೦೮) ನಡುವೆ ಮುಖಾಮುಖಿ ಅಪಘಾತ ನಡೆದ ಪರಿಣಾಮ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಶಿವನ್ ಎಂಬವರಿಗೆ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಕೇರಳದ ಕಾಂಞAಗಾಡಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಸುಧೀರ್ ಹೊದ್ದೆಟ್ಟಿ