ಗೋಣಿಕೊಪ್ಪ ವರದಿ, ಮೇ ೧೨: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಕಳಕಂಡ ಶುಭಾರಂಭ ಮಾಡಿದೆ. ಚಾಂಪಿಯನ್ ಕಾಣತಂಡ, ಅತಿಥೇಯ ಪೊರುಕೊಂಡ ಸೋಲನುಭವಿಸಿ ಹೊರ ಬಿದ್ದಿವೆ.
ನೂರೇರಕ್ಕೆ ಐಚೋಡಿಯಂಡ ವಿರುದ್ಧ ೨೫ ರನ್ಗಳ ಗೆಲುವು ದೊರೆ ಯಿತು. ನೂರೇರ ೩ ವಿಕೆಟ್ಗಳಲ್ಲಿ ೭೦ ರನ್ ಸಿಡಿಸಿತು. ಐಚೋಡಿಯಂಡ ೩ ವಿಕೆಟ್ ಕಳೆದುಕೊಂಡು ೪೫ ರನ್ ದಾಖಲಿಸಿತು.
ಮೂಕಳೇರವು ಅತಿಥೇಯ ಪೊರುಕೊಂಡವನ್ನು ೬ ವಿಕೆಟ್ಗಳಿಂದ ಸೋಲಿಸಿತು. ಪೊರುಕೊಂಡ ೩ ವಿಕೆಟ್ಗೆ ೩೬ ರನ್ ಗುರಿ ನೀಡಿತು. ಮೂಕಳೇರ ೪ ವಿಕೆಟ್ಗೆ ಜಯ ಪಡೆದುಕೊಂಡಿತು.
ಮಡ್ಲAಡವು ಮಲ್ಲಾಜೀರವನ್ನು ೮ ವಿಕೆಟ್ಗಳಿಂದ ಸೋಲಿಸಿತು. ಮಲ್ಲಾಜೀರ ೪ ವಿಕೆಟ್ ನಷ್ಟಕ್ಕೆ ೪೫ ರನ್, ಮಡ್ಲಂಡ ೨ ವಿಕೆಟ್ ಕಳೆದು ಕೊಂಡು ಜಯ ಪಡೆದುಕೊಂಡಿತು.
ಐಚAಡವು ಕುಂದೀರವನ್ನು ೮ ವಿಕೆಟ್ಗಳಿಂದ ಸೋಲಿಸಿತು. ಕುಂದೀರ ೩ ವಿಕೆಟ್ಗೆ ೨೯ ರನ್ ಗುರಿ ನೀಡಿತು. ಐಚಂಡ ೨ ವಿಕೆಟ್ ನಷ್ಟಕ್ಕೆ ಗುರಿ ಸಾಧನೆ ಮಾಡಿತು.
ಕೋಟ್ರಂಗಡ ಚಾರಿಮಂಡ ವಿರುದ್ಧ ೧೪ ರನ್ಗಳಿಂದ ಜಯಿಸಿತು. ಕೋಟ್ರಂಗಡ ೨ ವಿಕೆಟ್ ನಷ್ಟಕ್ಕೆ ೩೬ ರನ್, ಚಾರಿಮಂಡ ೩ ವಿಕೆಟ್ ಕಳೆದು ಕೊಂಡು ೨೨ ರನ್ಗೆ ಕುಸಿಯಿತು.
ಮೂಕೊಂಡ ತಂಡಕ್ಕೆ ಕಾಳಿಮಾಡ ಮತ್ತು ಬೊಜ್ಜಂಗಡ ವಿರುದ್ಧ ಎರಡು ಗೆಲುವು ಲಭಿಸಿತು. ಕಾಳಿಮಾಡವನ್ನು ೨೦ ರನ್ಗಳಿಂದ ಮಣಿಸಿತು. ಮೂಕೊಂಡ ೩ ವಿಕೆಟ್ ನಷ್ಟಕ್ಕೆ ೪೭ ರನ್ ಗುರಿ ನೀಡಿತು. ಕಾಳಿಮಾಡ ೩ ವಿಕೆಟ್ ಕಳೆದುಕೊಂಡು ೨೮ ರನ್ಗಳಿಗೆ ಕುಸಿಯಿತು. ಬೊಜ್ಜಂಗಡವನ್ನು ೭ ರನ್ಗಳಿಂದ ಸೋಲಿಸಿತು. ೫ ವಿಕೆಟ್ ಕಳೆದು ಕೊಂಡು ೨೮ ರನ್ ಗುರಿ ನೀಡಿತು. ಬೊಜ್ಜಂಗಡ ೩ ವಿಕೆಟ್ ನಷ್ಟಕ್ಕೆ ೨೧ ರನ್ ಮಾತ್ರ ಗಳಿಸಿತು.
ಕಾಣತಂಡವನ್ನು ಮುಕ್ಕಾಟೀರ (ಮಾದಾಪುರ) ತಂಡವು ೫ ರನ್ ಗಳಿಂದ ಸೋಲಿಸಿತು. ಮುಕ್ಕಾಟೀರ ೨ ವಿಕೆಟ್ ಕಳೆದುಕೊಂಡು ೪೦ ರನ್ ಗುರಿ ನೀಡಿತು. ಕಾಣತಂಡ ೫ ವಿಕೆಟ್ ಕಳೆದುಕೊಂಡು ೩೫ ರನ್ಗೆ ಕುಸಿಯಿತು.
ಕುಟ್ಟಂಡ (ಕಾರ್ಮಾಡು) ತಂಡವು ಬಾಳೆಯಡ ವಿರುದ್ಧ ೮ ವಿಕೆಟ್ ಜಯ ಸಾಧನೆ ಮಾಡಿತು. ಬಾಳೆಯಡ ೪ ವಿಕೆಟ್ ನಷ್ಟಕ್ಕೆ ೨೭ ರನ್ ಸಂಪಾದಿಸಿತು. ಕುಟ್ಟಂಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು.
ಮುಂಡAಡ ಅರಮಣಮಾಡ ವಿರುದ್ಧ ೮ ವಿಕೆಟ್ ಗೆಲುವು ಪಡೆಯಿತು. ಅರಮಣಮಾಡ ೫ ವಿಕೆಟ್ ನಷ್ಟಕ್ಕೆ ೨೬ ರನ್ ಪೇರಿಸಿತು. ಮುಂಡAಡ ೨ ವಿಕೆಟ್ ಕಳೆದುಕೊಂಡು ೨.೪ ಓವರ್ಗಳಲ್ಲಿ ಗುರಿ ಮುಟ್ಟಿತು.
ಮೇಕೇರಿರಕ್ಕೆ ಕೊಲ್ಲೀರ ವಿರುದ್ಧ ೧೧ ರನ್ಗಳ ಜಯ ದೊರೆಯಿತು. ಮೇಕೇರಿರ ೨ ವಿಕಟ್ ನಷ್ಟಕ್ಕೆ ೪೬ ರನ್, ಕೊಲ್ಲೀರ ೨ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿತು.
ನೂರೇರ ನಂದಿನೆರವAಡ ವಿರುದ್ಧ ೮ ರನ್ ಜಯ ಸಂಪಾದಿಸಿತು. ನೂರೇರ ೨ ವಿಕೆಟ್ಗೆ ೪೮ ರನ್, ನಂದಿನೆರವAಡ ೫ ವಿಕೆಟ್ಗೆ ೪೦ ರನ್ ಗಳಿಸಿತು.
ಮುದ್ದಂಡ ಮಾಚೇಟ್ಟೀರವನ್ನು ೧೦ ವಿಕೆಟ್ಗಳಿಂದ ಸೋಲಿಸಿತು. ಮಾಚೇಟ್ಟಿರ ೬ ವಿಕೆಟ್ ಕಳೆದುಕೊಂಡು ೧೮ ರನ್ ದಾಖಲಿಸಿತು. ಮುದ್ದಂಡ ೧೯ ರನ್ ಗಳಿಸಿತು.
ಬೊಟ್ಟಂಗಡವು ಮಂಡAಗಡ ವಿರುದ್ಧ ೧೭ ರನ್ ಜಯ ಸಾಧನೆ ಮಾಡಿತು. ಬೊಟ್ಟಂಗಡ ೪ ವಿಕೆಟ್ ಗಳಲ್ಲಿ ೪೬ ರನ್ ಗುರಿ ನೀಡಿತು. ಮಂಡAಗಡ ೬ ವಿಕೆಟ್ ನಷ್ಟಕ್ಕೆ ೨೮ ರನ್ ಗಳಿಸಿತು.
ಅಣ್ಣಳಮಾಡವು ಕಾಂಚೇರೀರ ವನ್ನು ೯ ವಿಕೆಟ್ಗಳಿಂದ ಮಣಿಸಿತು. ಕಾಂಚೇರಿರ ೫ ವಿಕೆಟ್ ನಷ್ಟಕ್ಕೆ ೨೮ರನ್ ಗುರಿ ನೀಡಿತು. ಅಣ್ಣಳಮಾಡ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಚೆರುವಾಳಂಡವು ಕಲಿಯಂಡ ವಿರುದ್ಧ ೨೫ ರನ್ ಗೆಲುವು ಪಡೆಯಿತು. ಚೆರುವಾಳಂಡ ೬೦ ರನ್ ಸಂಪಾದಿ ಸಿತು. ಕಲಿಯಂಡ ೨ ವಿಕೆಟ್ ಕಳೆದು ಕೊಂಡು ೩೫ ರನ್ ಅಷ್ಟೆ ಗಳಿಸಿತು.
ಮುಂಡಚಾಡೀರವು ಕಂಜಿತAಡ ವನ್ನು ೯ ವಿಕೆಟ್ಗಳಿಂದ ಸೋಲಿಸಿತು. ಕಂಜಿತAಡ ೩ ವಿಕೆಟ್ಗೆ ೨೦ ರನ್ ದಾಖಲಿಸಿತು. ಮುಂಡಚಾಡೀರ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಚಾಂಪಿಯನ್ ಕಳಕಂಡವು ಮುಂಡಿಯೋಳAಡವನ್ನು ೭ ವಿಕೆಟ್ಗಳಿಂದ ಸೋಲಿಸಿತು. ಮುಂಡಿಯೋಳAಡವು ೧ ವಿಕೆಟ್ ನಷ್ಟಕ್ಕೆ ೩೬ ರನ್ ಗುರಿ ನೀಡಿತು. ಕಳಕಂಡ ೩ ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು.
ನೆಲ್ಲಚಂಡಕ್ಕೆ ಬೊಳ್ತಂಡ ವಿರುದ್ಧ ೨೪ ರನ್ಗಳ ಜಯ ದೊರೆಯಿತು. ನೆಲ್ಲಚಂಡ ೩ ವಿಕೆಟ್ಗಳಲ್ಲಿ ೪೫ ರನ್ ಸಿಡಿಸಿತು. ಬೊಳ್ತಂಡ ೨ ವಿಕೆಟ್ ಕಳೆದುಕೊಂಡು ೨೧ ರನ್ಗೆ ಕುಸಿಯಿತು.
ಕೊಲ್ಲೀರ ಭರತ್, ನಂದಿನೆರವAಡ ಕರುಣ್, ಮಾಚೇಟ್ಟೀರ ತಿಲಕ್, ಮಂಡAಗಡ ವಿಕೇತ್, ಕಂಚೇರಿರ ಬಿದ್ದಪ್ಪ, ಕಲಿಯಂಡ ಕೌಶಿಕ್, ಕಂಜಿತAಡ ದಿಲನ್, ಮುಂಡಿಯೋಳAಡ ಹರ್ಷನ್, ಐಚೋಡಿಯಂಡ ಶಾನ್, ಬೊಳ್ತಂಡ ಕಿರಣ್, ಚಾರಿಮಂಡ ಗಣಪತಿ, ಕುಂದೀರ ಮಧು, ಮಲ್ಲಾಜೀರ ವಿದೇಶ್, ಪೊರುಕೊಂಡ ಸುನಿಲ್, ಅರಮಣಮಾಡ ನವೀನ್, ಕಾಣತಂಡ ವಿಪಿನ್, ಬೊಜ್ಜಂಗಡ ಚಂಗಪ್ಪ, ಬಾಳೆಯಡ ವಿನಿಲ್, ಕಾಳಿಮಾಡ ತಿಮ್ಮಯ್ಯ ಪಂದ್ಯ ಪುರುಷ ಪ್ರಶಸ್ತಿ ಪಡೆದರು.