ಕುಶಾಲನಗರ, ಮೇ ೧೨: ಕುಶಾಲನಗರ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬಸ್ ನಿಲ್ದಾಣದ ಆವರಣದಲ್ಲಿ ಮಧ್ಯಾಹ್ನ ವೇಳೆಗೆ ವಿಷ ಸೇವಿಸಿದ ಅಂದಾಜು ೪೫ ರಿಂದ ೫೦ ವರ್ಷ ಪ್ರಾಯದ ವ್ಯಕ್ತಿ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಈ ಸಂದರ್ಭ ಸಾರ್ವಜನಿಕರು ಸಂಬAಧಪಟ್ಟ ಪೊಲೀಸರಿಗೆ ತಿಳಿಸಿದ ಮೇರೆಗೆ ತಕ್ಷಣ ಆತನನ್ನು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಯಿತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದು ವ್ಯಕ್ತಿಯ ವಿವರ ಲಭ್ಯವಾಗಿಲ್ಲ ಎಂದು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯ ಕುಟುಂಬ ಸದಸ್ಯರು ಪತ್ತೆಯಾದಲ್ಲಿ ಕುಶಾಲನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಕೋರಿದ್ದಾರೆ.