ಶನಿವಾರಸಂತೆ, ಮೇ ೧೨: ತಾಲೂಕಿನ ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೨೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.
ವಿಶೇಷ ಅನುದಾನದಡಿ ತಲಾ ೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ತ್ಯಾಗರಾಜ ಕಾಲೋನಿ ಸಮುದಾಯ ಭವನ ಸಮೀಪದ ರಸ್ತೆ, ವಿಎಸ್ಎಸ್ಎನ್ನಿಂದ ಮಾರುಕಟ್ಟೆ ಸಂಪರ್ಕ ರಸ್ತೆ, ಪೊಲೀಸ್ ಠಾಣೆಯಿಂದ ಬಿದರೂರು ಸಂಪರ್ಕ ರಸ್ತೆ, ಮಾರುಕಟ್ಟೆಯ ಬೈಪಾಸ್ ರಸ್ತೆ, ಶನಿವಾರಸಂತೆ-ಹೆಮ್ಮನೆ ಸಂಪರ್ಕ ರಸ್ತೆಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್, ಉಪಾಧ್ಯಕ್ಷ ಮಧು, ಸದಸ್ಯ ಎಸ್.ಎನ್. ರಘು, ಜಿ.ಪಂ. ಮಾಜಿ ಸದಸ್ಯೆ ಸರೋಜಮ್ಮ, ತಾ.ಪಂ. ಮಾಜಿ ಸದಸ್ಯೆ ಸವಿತಾ ಸತೀಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಅಭಿಯಂತರರಾದ ವೀರೇಂದ್ರ, ಸಲೀಂ, ದುಂಡಳ್ಳಿ ಗ್ರಾ.ಪಂ. ಉಪಾಧ್ಯಕ್ಷ ನಿತಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.