ಮಡಿಕೇರಿ, ಮೇ ೧೨ : ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸö್ಯ ಸಂಪದಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ.
೨೦೨೧-೨೨ನೇ ಸಾಲಿನಲ್ಲಿ ಈ ಯೋಜನೆಯಡಿ ಹಿತ್ತಲು ಅಲಂಕಾರಿಕ ಮೀನು ಸಾಕಾಣಿಕೆ ಘಟಕ (ಕರಾವಳಿ ಮತ್ತು ಒಳನಾಡು), ಮದ್ಯಮ ಆರ್ಎಎಸ್ ಸ್ಥಾಪನೆ (ಕನಿಷ್ಟ ೩೦ ಘನಮೀಟರ್ ಸಾಮರ್ಥ್ಯದ ೧೦ ಟ್ಯಾಂಕ್ / ಬೆಳೆ ೬ ಟ್ಯಾಂಕ್ನೊAದಿಗೆ) ಬಯೋಪ್ಲೊಕ್ (೪ ಮೀ. ಡಯಾ ೧ ಮೀ ಎತ್ತರದ ೨೫ ಟ್ಯಾಂಕ್ಗಳು), ಸಣ್ಣ ಆರ್ಎಎಸ್ (೧೦೦ ಘನ ಮೀಟರ್ ಸಾಮರ್ಥ್ಯದ ೧ ಟ್ಯಾಂಕ್ ಬಯೋಪ್ಲೋಕ್ (೪ ಮೀ ಡಯಾ ೧.೫ ಮೀ ಎತ್ತರದ ೭ ಟ್ಯಾಂಕ್ಗಳು) ಘಟಕವನ್ನು ಸ್ಥಾಪಿಸುವುದು, ಬ್ಯಾಕ್ಯಾರ್ಡ್ ಮಿನಿ ಆರ್ಎಎಸ್ ಘಟಕಗಳ ಸ್ಥಾಪನೆ, ಐಸ್ ಪೆಟ್ಟಿಗೆಯೊಂದಿಗೆ ಸೈಕಲ್ ಕಾರ್ಯಕ್ರಮಗಳಿಗೆ ಅರ್ಜಿಗಳು ಸ್ವೀಕೃತವಾಗಿರದ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿರ್ದೇಶನಾಲಯದ ನಿರ್ದೇಶನದಂತೆ ಈ ಯೋಜನೆಗಳಿಗೆ ರೈತರಿಂದ ಅರ್ಜಿ ಸ್ವೀಕರಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನವಾಗಿದೆ. ಜಿಲ್ಲೆಯ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.