ಮಡಿಕೇರಿ, ಮೇ ೧೨: ಅಮ್ಮತ್ತಿ ಕೊಡವ ಸಮಾಜದಲ್ಲಿ ಇತ್ತೀಚೆಗೆ ಸಮಾಜದ ಆಡಳಿತಮಂಡಳಿಯ ಸಹಯೋಗದೊಂದಿಗೆ ಪೊಮ್ಮಕ್ಕಡ ದಿನಾಚರಣೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಿತು.

ಕುಟ್ಟಂಡ ರೀಟಾ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮವನ್ನು ಮುಖ್ಯ ಅತಿಥಿಗಳಾಗಿದ್ದ ಮಲಚೀರ ಯಶೋಧ ದೇವಯ್ಯ, ಮಂಡೇಪAಡ ಗೀತಾ ಮಂದಣ್ಣ, ಡಾ. ಕುಪ್ಪಂಡ ವೀಣಾ ರವೀಂದ್ರ ಅವರುಗಳು ಉದ್ಘಾಟಿಸಿದರು.

ಮಹಿಳೆಯರಿಗೆ ಸಿಹಿ ತಿಂಡಿ ಮಾಡುವ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾವಾಡಿ ಮಹಿಳಾ ಸಮಾಜದ ವತಿಯಿಂದ ಉಮ್ಮತ್ತಾಟ್ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ, ವಿವಿಧ ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಐನಂಡ ಲೀನಾ ಗಣಪತಿ, ಕುಟ್ಟಂಡ ರಾಣಿ ಚಿಣ್ಣಪ್ಪ, ಮಚ್ಚಾರಂಡ ಪ್ರಮೀಳಾ ಮಾಚಯ್ಯ, ಪೂದ್ರಿಮಾಡ ಗಂಗಾ ಗಣಪತಿ, ಪಟ್ಟಡ ಜ್ಯೋತಿ ಉತ್ತಯ್ಯ, ಮನೆಯಪಂಡ ಶಾಲಿಕ್‌ದೇವಯ್ಯ, ಮಂಡೇಪAಡ ಸರಸ್ವತಿ ಮಾಚಯ್ಯ, ಕಾವಾಡಿಚಂಡ ಪವಿತ್ರ ಉತ್ತಯ್ಯ ಉಪಸ್ಥಿತರಿದ್ದರು. ರೀಟಾ ಚಿಣ್ಣಪ್ಪ ಪ್ರಾರ್ಥಿಸಿ, ಐನಂಡ ಝೀನಾ ಕಿರಣ್ ನಿರೂಪಿಸಿದರು. ಕೋಡಿಮಣಿಯಂಡ ಅಶ್ವಿನಿಗಣಪತಿ ಸ್ವಾಗತಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.