(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಮೇ ೧೦: ಕಂದಾಯ ಇಲಾಖೆಗೆ ಸಂಬAಧಿಸಿದAತೆ ಕೊಡಗು ಜಿಲ್ಲೆ ಈ ಹಿಂದಿನಿAದಲೂ ಬಹುತೇಕವಾಗಿ ಸಮಸ್ಯೆಗಳನ್ನೇ ಎದುರಿಸಿಕೊಂಡು ಬರುತ್ತಿದೆ. ರಾಜ್ಯದ ಇತರೆಡೆಗೆ ಹೋಲಿಸಿದರೆ ಕೊಡಗಿನ ಸಮಸ್ಯೆಗಳು - ಅಗತ್ಯತೆಗಳು ವಿಭಿನ್ನವಾದದ್ದು. ಇಲ್ಲಿನ ಹಲವು ವಿಚಾರಗಳನ್ನು ಅಂದರೆ ಕಂದಾಯ ದಾಖಲೆಗಳನ್ನು ಅರಿತುಕೊಳ್ಳಲು ಇಲ್ಲಿಗೆ ಬರುವ ಜಿಲ್ಲಾಧಿಕಾರಿಗಳಿಂದ ಹಿಡಿದು ಸಂಬAಧಿಸಿದ ಬಹುತೇಕ ಇತರ ಅಧಿಕಾರಿಗಳಿಗೆ ಹಲವು ಸಮಯಗಳೇ ಬೇಕಾಗುತ್ತದೆ. ಇದನ್ನು ಅರ್ಥೈಸಿಕೊಳ್ಳುವಷ್ಟರಲ್ಲೇ ಅವರು ಜಿಲ್ಲೆಯಿಂದಲೂ ವರ್ಗಾವಣೆಗೊಂಡಿರುತ್ತಾರೆ.
ಜಮ್ಮಾ ಜಾಗದ ವಿಚಾರ, ಆರ್.ಟಿ.ಸಿ.ಯಲ್ಲಿನ ಗೊಂದಲ, ಪಟ್ಟೆದಾರರ ವಿಚಾರ, ಪೌತಿ ಖಾತೆ ಸೇರಿದಂತೆ ಹತ್ತು-ಹಲವು ಸಮಸ್ಯೆಗಳು ಜಿಲ್ಲೆಯ ಜನತೆಯನ್ನು ಕಾಡುತ್ತಿವೆ. ಹೋಬಳಿ ಕಚೇರಿಗಳಿಂದ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ತನಕ ಜನರು ವಿವಿಧ ದಾಖಲೆಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರಂತರವಾಗಿ ಮುಂದುವರಿದುಕೊAಡೆ ಬರುತ್ತಿದ್ದು ಜನತೆ ಇದರ ಬಗ್ಗೆ ಹತಾಶರಾಗುವಂತಾಗಿದೆ.
ಕೊಡಗಿನ ಜಮ್ಮಾ ಹಿಡುವಳಿಗೆ ಸಂಬAಧಿಸಿ ದಂತೆ ತಿದ್ದುಪಡಿ ಕಾಯಿದೆ ಜಾರಿಯಾದರೂ ಅದರ ಅನುಷ್ಠಾನ ಸೂಕ್ತ ರೀತಿಯಲ್ಲಾಗಿಲ್ಲ. ಪೌತಿ ಖಾತೆ ವಿಚಾರದಲ್ಲಂತೂ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಖಾಲಿ ಜಾಗಕ್ಕೆ ಕಂದಾಯ ನಿಗದಿ ವಿಚಾರವೂ ಇನ್ನೂ ಅಂತಿಮವಾಗಿಲ್ಲ. ಆರ್.ಟಿ.ಸಿ.ಯಲ್ಲಿನ ಗೊಂದಲ ಒಂದೆಡೆಯಾದರೆ, ನಕ್ಷೆ ಆಕಾರ್‌ಬಂದ್‌ನ ಸಮಸ್ಯೆ ಮತ್ತೊಂದೆಡೆಯಿದೆ. ಬಹುತೇಕ ದಾಖಲೆಗಳು P೧-P೨ ಎಂದೇ ಇದ್ದು ಇದರ ಸಮಸ್ಯೆಗಳೂ ಮತ್ತೂ ವಿಭಿನ್ನವಾಗಿವೆ.
ಸರಕಾರ ಯಾವುದೇ ಘೋಷಣೆಗಳನ್ನು ಮಾಡಿದರೂ ಇವು ಘೋಷಣೆಯಲ್ಲೇ ಉಳಿಯುತ್ತಿದೆಯೇ ಹೊರತು ಯಾವುದೂ ಅನುಷ್ಠಾನಕ್ಕೆ ಮಾತ್ರ ಬರುತ್ತಿಲ್ಲ. ಇದರೊಂದಿಗೆ ಕಂದಾಯ ಇಲಾಖೆಯೊಳಗಿನ ಅವ್ಯವಸ್ಥೆ-ಭ್ರಷ್ಟಾಚಾರದ ಆರೋಪಗಳು ಪದೇ ಪದೇ ಕೇಳಿ ಬರುತ್ತಿರುವುದು ಮತ್ತೊಂದು ಗಂಭೀರವಾದAತಹ ವಿಚಾರವಾಗಿದೆ.
ದಾಖಲೆಗಳು ಸರಿಯಿಲ್ಲದಿರುವುದು, ಇದಕ್ಕೆ ನಿರಂತರ ಪ್ರಯತ್ನ ನಡೆಸಿದರೂ ಶಾಶ್ವತವಾಗಿ ಇದಕ್ಕೆ ಮುಕ್ತಿ ಸಿಗದಿರುವುದರಿಂದ ಬಹುತೇಕ ಕೃಷಿಯನ್ನೇ ಅವಲಂಭಿಸಿರುವ ಕೊಡಗಿನ ರೈತರು - ಬೆಳೆಗಾರರು ಸಮಸ್ಯೆಗಳಿಂದಲೇ ವರ್ಷಾನುಗಟ್ಟಲೆಯಿಂದ ಬಳಲುತ್ತಿದ್ದಾರೆ.
ಇಂತಹ ಪರಿಸ್ಥಿತಿಯಿಂದಾಗಿ ಸರಕಾರದ ವಿವಿಧ ಯೋಜನೆಗಳು ಸೌಲಭ್ಯಗಳನ್ನು ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ. ಸಾಲ ಸೌಲಭ್ಯ, ಸಹಾಯಧನ ಮತ್ತಿತರ ಹಲವು ಅಂಶಗಳು ಜಿಲ್ಲೆಯ ಹೆಚ್ಚಿನ ಜನರಿಗೆ ಸಿಗುವುದೇ ಇಲ್ಲ. ಎಲ್ಲದಕ್ಕೂ ದಾಖಲೆಗಳ ಸಮಸ್ಯೆ ಎದುರಾಗುತ್ತಿದೆ.
ಕೊಡಗಿನ ಈ ಸಮಸ್ಯೆಗಳು ಇಂದು-ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ಇದು ನಿರಂತರವಾಗಿ ಮುಂದುವರಿದಿದೆ.
(ಮೊದಲ ಪುಟದಿಂದ) ಇಂತಹ ಪರಿಸ್ಥಿತಿಯ ನಡುವೆ ಕಂದಾಯ ಇಲಾಖೆಗಳ ಸಮಸ್ಯೆಗಳನ್ನು ಸರಿಪಡಿಸುವ ಬೃಹತ್ ಆಶ್ವಾಸನೆಯ ಪ್ರಚಾರದೊಂದಿಗೆ ಜಿಲ್ಲೆಗೆ ರಾಜ್ಯ ಕಂದಾಯ ಸಚಿವರಾದ ಆರ್. ಆಶೋಕ್ ಅವರು ತಾ. ೧೨ ರಂದು (ನಾಳೆ) ಆಗಮಿಸುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳು ವಿಧಾನಸಭೆ-ವಿಧಾನ ಪರಿಷತ್‌ಗಳಲ್ಲೂ ಜಿಲ್ಲೆಯ ಜನಪ್ರತಿನಿಧಿಗಳಿಂದ ಪ್ರಸ್ತಾಪವಾಗಿರುವುದು ಕಂದಾಯ ಸಚಿವರಿಗೆ ಸ್ವತಃ ಅರಿವಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಹೊಸದಾಗಿ ಎರಡು ತಾಲೂಕುಗಳು ರಚನೆಗೊಂಡಿದ್ದರೂ ತಾಲೂಕುಗಳ ಪೂರ್ಣ ಪ್ರಮಾಣದ ಕಾರ್ಯನಿರ್ವಹಣೆ ಇನ್ನೂ ಪ್ರಾರಂಭವಾಗಿಲ್ಲ. ಜಿಲ್ಲೆಯ ಬಿಜೆಪಿ ಪಕ್ಷ ಕೂಡ ಈ ಬಾರಿಯ ಕಂದಾಯ ಸಚಿವರ ಭೇಟಿಯ ಬಗ್ಗೆ ಭಾರೀ ಪ್ರಚಾರವನ್ನೇ ಕೊಟ್ಟಿದೆ.
ಮಾತ್ರವಲ್ಲ ಜನರು ಸಮಸ್ಯೆಗಳನ್ನು ಸಚಿವರ ಮುಂದಿಡುವAತೆಯೂ ಸಲಹೆಯನ್ನು ನೀಡಿದೆ. ಈ ಎಲ್ಲಾ ಅಂಶಗಳಿAದಾಗಿ ಈ ತನಕದ ಭೇಟಿಗಿಂತ ತಾ. ೧೨ರಂದು ಕಂದಾಯ ಸಚಿವರ ಜಿಲ್ಲಾ ಭೇಟಿ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಹಜವಾಗಿಯೇ ಜನತೆಯೂ ಭಾರೀ ನಿರೀಕ್ಷೆಯಲ್ಲಿದ್ದಾರೆ. ಸಚಿವರ ಭೇಟಿಯಿಂದ ಪ್ರಾಯೋಗಿಕವಾಗಿ ಈ ದಿನದ ಸಭೆಯಲ್ಲಿ ಯಾವ ಜಿಲ್ಲೆಯ ಭೂಹಿಡುವಳಿ ಸಮಸ್ಯೆಗಳ ಪರಿಹಾರಕ್ಕೆ ಪೂರಕ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸಫಲಗೊಳ್ಳುವುದೇ ಎನ್ನುವ ಬಗ್ಗೆ ಜನ ಕಾತರರಾಗಿದ್ದಾರೆ.