ಕಣಿವೆ, ಮೇ ೧೧: ಕುಶಾಲನಗರದ ರಥಬೀದಿಯ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿ ಪ್ರಯುಕ್ತ ದೇವಿಗೆ ವಿಶೇಷವಾದ ಚಕ್ಕುಲಿ, ಕೋಡುಬಳೆ ಮತ್ತು ನಿಪ್ಪಟ್ಟು ಅಲಂಕಾರ ಮಾಡಲಾಗಿತ್ತು.

ಸೋಮವಾರ ಸಂಕಲ್ಪ ಗ್ರೂಪ್ ಸದಸ್ಯರು ತಿಂಡಿಗಳ ಅಲಂಕಾರವನ್ನು ದೇವಸ್ಥಾನದ ಪುರೋಹಿತರಾದ ವಿಜೇಂದ್ರ ಮತ್ತು ಅವರ ತಂಡದ ಮೂಲಕ ನೆರವೇರಿಸಲಾಯಿತು. ಈ ಸಂದರ್ಭ ಸಂಕಲ್ಪ ಗ್ರೂಪ್ ಸದಸ್ಯರಾದ ಕೆ.ಜೆ. ರಮೇಶ್, ವಿ.ಪಿ. ಮುರಳಿ, ಬಿ.ಎಲ್. ಸತೀಶ್, ಪಿ.ಎನ್. ಅನಿಲ್, ಪಿ.ಆರ್. ಮಂಜುನಾಥ್, ಎ.ಎಸ್. ಸುರೇಶ್ ಬಾಬು, ಬಿ.ಎಂ. ಮುರಳಿ ಮತ್ತು ಎಸ್.ಎನ್. ನಾಗೇಂದ್ರ ಇದ್ದರು.