ಶನಿವಾರಸಂತೆ, ಮೇ ೧೦: ದುಂಡಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕುರಿ, ಕೋಳಿ, ಹಂದಿ, ಮೀನು ಲೈಸನ್ಸ್ಗಳನ್ನು ನವೀಕರಿಸುವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ತೊಂದರೆಗಳನ್ನು ಪರಿಶೀಲಿಸಿ ತುರ್ತಾಗಿ ನಿರ್ವಹಿಸುವಂತೆ ತೀರ್ಮಾನಿಸಲಾಯಿತು

ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಕಚೆೆÃರಿಗೆ ಓರ್ವ ಅಟೆಂಡರನ್ನು ನೇಮಕಾತಿ ಮಾಡಿಕೊಳ್ಳಲು ಪಂಚಾಯಿತಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರಿಗೆ ಅಧಿಕಾರವಿಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯೆ ಎಸ್.ಪಿ. ಭಾಗ್ಯ ಮಾತನಾಡಿ, ಪಂಚಾಯಿತಿ ನಡವಳಿಕೆ ಪುಸ್ತಕದಲ್ಲಿ ತಮ್ಮ ಹೆಸರನ್ನು ನಮೂದಿಸದೆ ಇರುವುದರಿಂದ ಪಂಚಾಯಿತಿ ಅಧ್ಯಕ್ಷೆ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಪ್ರತಿಭಟಿಸಿ ಸಭೆಯಿಂದ ಹೊರ ಹೋಗುವುದಾಗಿ ತಿಳಿಸಿದಾಗ ಪಂಚಾಯಿತಿ ಅಧಿಕಾರಿಗಳು ಕ್ಷಮೆಯಾಚಿಸಿದರು. ಪಂಚಾಯಿತಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ೧ ವರ್ಷ ಕಳೆದರೂ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತ ಮಂಡಳಿಯ ನಾಮ ಫಲಕ ಅಳವಡಿಸದೆ ಇರುವುದರಿಂದ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಪಿ. ನಿತಿನ್, ಸದಸ್ಯರುಗಳಾದ ಕೆ.ಎಸ್. ಜಾನಕಿ, ನಂದಿನಿನಾಗರತ್ನ, ಎಸ್.ಪಿ. ಭಾಗ್ಯ, ಪಿ.ಹೆಚ್. ಗೋಪಿಕಾ, ಸತ್ಯವತಿ ಹೆಚ್.ಆರ್., ಭವಾನಿ, ಡಿ.ಪಿ. ಬೋಜಪ್ಪ, ಎಸ್.ಸಿ. ಕಾಂತರಾಜು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.